AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !

ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !

ಭಾವನಾ ಹೆಗಡೆ
|

Updated on: Oct 24, 2026 | 1:05 PM

Share

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳಾದ ರೆಸ್ಟೋರೆಂಟ್‌, ಸ್ಪಾ, ಜಿಮ್‌ನೊಂದಿಗೆ ಈ ರಾಜವೈಭವದ ರೈಲು ಮರುಸಂಚಾರ ಆರಂಭಿಸಿದೆ. ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸಲು ಆಫ್‌ ಸೀಸನ್‌ನಲ್ಲಿ ಸಾಮಾನ್ಯರಿಗೂ ಕಡಿಮೆ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ.

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು, ಗೋಲ್ಡನ್ ಚಾರಿಯಟ್, ನವೀಕೃತ ರೂಪದಲ್ಲಿ ಮರುಸಂಚಾರ ಆರಂಭಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲಿನ ಸೌಲಭ್ಯಗಳನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈಲಿನೊಳಗಿನ ಸೌಲಭ್ಯಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, ಇದರಲ್ಲಿ ಎರಡು ರೆಸ್ಟೋರೆಂಟ್‌ಗಳು, ಸ್ಪಾ, ಜಿಮ್‌ನಂತಹ ಅತ್ಯಾಧುನಿಕ ಸೌಲಭ್ಯಗಳಿದ್ದು, ಕೇವಲ 80 ಪ್ರಯಾಣಿಕರಿಗೆ 60 ಸಿಬ್ಬಂದಿ ಸೇವೆ ಒದಗಿಸುತ್ತಾರೆ ಎಂದು ತಿಳಿಸಿದರು. ಇದು ರಾಜವೈಭವದ ಅನುಭವ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಈ ರೈಲು ದುಬಾರಿಯಾಗಿದ್ದರೂ, ಆಫ್-ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಗೋಲ್ಡನ್ ಚಾರಿಯಟ್ ರೈಲಿನ ಮರುಪ್ರಾರಂಭಕ್ಕೆ ಹಿಂದಿನ ಸಚಿವರಾದ ಜಾರ್ಜ್ ಅವರ ಪಾತ್ರವನ್ನು ಶ್ಲಾಘಿಸಿದ ಸಿಎಂ, ಕರ್ನಾಟಕದ ಪ್ರವಾಸಿಗರೂ ಇದನ್ನು ಹೆಚ್ಚು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು. ಐಆರ್‌ಸಿಟಿಸಿ, ರೈಲ್ವೆ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಈ ರೈಲನ್ನು ನಿರ್ವಹಿಸುತ್ತಿದ್ದು, ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More