ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಕರ್ನಾಟಕ ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರನ್ನು ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿದೆ. ನೃಪತುಂಗ ರಸ್ತೆಯ ಡಿಜಿ & ಐಜಿಪಿ ಕಚೇರಿಯಲ್ಲಿ, ನಿರ್ಗಮಿತ ಡಿಜಿ & ಐಜಿಪಿ ಡಾ. ಅಲೋಕ್ ಮೋಹನ್ ಅವರು ಡಾ. ಸಲೀಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ನೇಮಕಾತಿಯು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.
ನೂತನ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ನಿರ್ಗಮಿತ ಡಿಜಿ&ಐಜಿಪಿ ಡಾ.ಅಲೋಕ್ ಮೋಹನ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ನೃಪತುಂಗ ರಸ್ತೆಯ ಡಿಜಿ&ಐಜಿಪಿ ಕಚೇರಿಯಲ್ಲಿ ಡಾ.ಎಂ.ಎ.ಸಲೀಂ ಅವರಿಗೆ ಬ್ಯಾಟನ್ ನೀಡುವ ಮೂಲಕ ಡಾ.ಅಲೋಕ್ ಮೋಹನ್ ಅವರು ಅಧಿಕಾರ ಹಸ್ತಾಂತರಿಸಲಾಯಿತು. ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕನ್ನಡಿಗ ಡಾ. ಎಂ ಎ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ (ಮೇ.21) ಆದೇಶ ಹೊರಡಿಸಿದೆ.
