Mysore Pak: ನಮ್ಮ ಹೆಮ್ಮೆಯ ಮೈಸೂರ್ ಪಾಕ್ ಗೆ ಅಂತರಾಷ್ಟ್ರೀಯ ಖ್ಯಾತಿ, ಜಗತ್ತಿನ 50 ಉತ್ಕೃಷ್ಟ ಸ್ಟ್ರೀಟ್ ಫುಡ್ ಗಳ ಪೈಕಿ 14ನೇ ಸ್ಥಾನ!

|

Updated on: Jul 21, 2023 | 1:03 PM

ದಕ್ಷಿಣ ಭಾರತದಲ್ಲಿ ಮೈಸೂರು ಪಾಕ್ ಇಲ್ಲದೆ ಯಾವುದೇ ಮಂಗಳ ಕಾರ್ಯಕ್ರಮ ಪೂರ್ತಿಯೆನಿಸದು.

ಬೆಂಗಳೂರು: ಈಗ ಬಿಡಿ, ನಮ್ಮ ರಾಜ್ಯದ ಎಲ ಪ್ರಮುಖ ಪಟ್ಟಣಗಳಲ್ಲಿ ಎಲ್ಲ ಬಗೆಬಗೆಯ ಸ್ವಾದಿಷ್ಟ ಸಿಹಿ ತಿನಿಸುಗಳು ಸಿಗುತ್ತವೆ. ಬೆಂಗಾಲೀ ಸ್ವೀಟ್ಸ್, ದೆಹಲಿ ಮಿಠಾಯಿ, ತಮಿಳುನಾಡು ಹಲ್ವಾ- ಸೂರ್ಯನಡಿ ಕಾಣುವ ಯಾವುದೇ ಸಿಹಿತಿಂಡಿಯನ್ನು ಹೆಸರಿಸಿ ಅದು ಸಿಗುತ್ತದೆ. ಆದರೆ, ಬಹತೇಕ ಭಾರತೀಯರಿಗೆ ಅತ್ಯಂತ ಇಷ್ಟವಾಗುವ ಸ್ವೀಟ್ ಯಾವುದು ಗೊತ್ತಾ? ನಮ್ಮ ಹೆಮ್ಮೆಯ ಮೈಸೂರು ಪಾಕ್! ಇದು ನಮ್ಮಲ್ಲೇ ಸೃಷ್ಟಿಯಾಗಿ ಜಗದ್ವಿಖ್ಯಾತಗೊಂಡಿರುವ ಸ್ವೀಟ್ ಅನ್ನೋ ಕಾರಣಕ್ಕೆ ಹೀಗೆ ಹೇಳುತ್ತಿಲ್ಲ ಮಾರಾಯ್ರೇ. ಟೇಸ್ಟ್ ಅಂಡ್ ಟೇಸ್ಟ್ ಅಟ್ಲಾಸ್ ಹೆಸರಿನ ಸಂಸ್ಥೆಯೊಂದು ನಡೆಸಿದ ವಿಶ್ವದ 50 ಅತ್ಯಂತ ಜನಪ್ರಿಯ ಮತ್ತು ಸ್ವಾದಿಷ್ಟ ಸ್ಟ್ರೀಟ್ ಫುಡ್ ಗಳ ಸಮೀಕ್ಷೆಯಲ್ಲಿ ಮೈಸೂರು ಪಾಕ್ ಹದಿನಾಲ್ಕನೇ ಸ್ಥಾನ ಗಿಟ್ಟಿಸಿದೆ! ಹೌದು, ನೀವು ಓದಿದ್ದು ಸರಿ ಮತ್ತು ಸತ್ಯ. ದಕ್ಷಿಣ ಭಾರತದಲ್ಲಿ ಮೈಸೂರು ಪಾಕ್ ಇಲ್ಲದೆ ಯಾವುದೇ ಮಂಗಳ ಕಾರ್ಯಕ್ರಮ ಪೂರ್ತಿಯೆನಿಸದು, ಹೌದು ತಾನೆ?

ಸುಮಾರು 90 ವರ್ಷಗಳ ಹಿಂದೆ ಮೈಸೂರಿನ ಒಡೆಯರ್ ಸಾಮ್ರಾಜ್ಯದಲ್ಲಿ ಮುಖ್ಯ ಬಾಣಸಿಗರಾಗಿದ್ದ ಮಾದಪ್ಪ ಆಗಿನ ರಾಜ ಕೃಷ್ಣರಾಜ ಒಡೆಯರ್ ಊಟಕ್ಕೆ ಕೂತಾಗ ತಟ್ಟೆಯಲ್ಲಿ ಸಿಹಿ ತಿಂಡಿ ಇಲ್ಲದನ್ನು ಗಮನಿಸಿ ಅವಸರಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟಿನ ಮಿಶ್ರಣ ತಯಾರಿಸಿಕೊಟ್ಟು ಮಾಹರಾಜರಿಂದ ಭಾರೀ ಪ್ರಶಂಸೆ ಗಿಟ್ಟಿಸಿದ ಆ ತಿಂಡಿ ಇವತ್ತು ಜಗತ್ತಿನ 14 ನೇ ಸರ್ವೋತೃಷ್ಟ, ಸ್ವಾದಿಷ್ಟ, ಜನಪ್ರಿಯ ಮತ್ತು ಎಲ್ಲ ವಯೋಮಾನದವರಿಗೆ ಇಷ್ಟವಾಗುವ ಸಿಹಿ ತಿಂಡಿಯಾದೀತು ಅಂತ ಆ ಪಾಕ ಪ್ರವೀಣರು ಭಾವಿಸಿರಲಿಕ್ಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ