‘ವಿಕ್ರಾಂತ್​ ರೋಣ’, ‘ಕೆಜಿಎಫ್​ 2’ ಬಗ್ಗೆ ಮಾತನಾಡಿದ ನಟ ಕಾರ್ತಿಕೇಯ

| Updated By: ರಾಜೇಶ್ ದುಗ್ಗುಮನೆ

Updated on: Feb 22, 2022 | 6:01 PM

‘ಆರ್​ಎಕ್ಸ್​ 100’ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದರು ಕಾರ್ತಿಕೇಯ. ‘ವಲಿಮೈ’ ಸಿನಿಮಾ ಕನ್ನಡಕ್ಕೂ ಡಬ್​ ಆಗಿ ತೆರೆಗೆ ಬರುತ್ತಿದೆ. ಇದು ಅವರಿಗೆ ಸಂತಸ ತಂದಿದೆ.

ತಮಿಳು ನಟ ಅಜಿತ್ (Ajith Kumar)​ ನಟನೆಯ ‘ವಲಿಮೈ’ ಸಿನಿಮಾ (Valimai Movie) ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಕಾರ್ತಿಕೇಯ ಕೂಡ ನಟಿಸಿದ್ದಾರೆ. ಇದು ಅವರ ಮೊದಲ ತಮಿಳು ಸಿನಿಮಾ. ಅವರು ‘ಆರ್​ಎಕ್ಸ್​ 100’ ಸಿನಿಮಾ (RX 100 Movie) ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದರು. ‘ವಲಿಮೈ’ ಸಿನಿಮಾ ಕನ್ನಡಕ್ಕೂ ಡಬ್​ ಆಗಿ ತೆರೆಗೆ ಬರುತ್ತಿದೆ. ಇದು ಅವರಿಗೆ ಸಂತಸ ತಂದಿದೆ. ವೇದಿಕೆ ಮೇಲೆ ಮಾತನಾಡಿರುವ ಅವರು, ‘ಅಜಿತ್​ ಅವರ ಜತೆ ನಟಿಸಿದ್ದು ಖುಷಿ ಇದೆ. ಕನ್ನಡದ ಹಲವು ಸಿನಿಮಾಗಳು ಬೇರೆ ರಾಜ್ಯಗಳಲ್ಲೂ ಸದ್ದು ಮಾಡುತ್ತಿವೆ. ‘ವಿಕ್ರಾಂತ್​ ರೋಣ’, ‘ಕೆಜಿಎಫ್​ 2’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ’ ಎಂದರು. ಅಷ್ಟೇ ಅಲ್ಲ ಮುಂದಿನ ಬಾರಿ ಕರ್ನಾಟಕಕ್ಕೆ ಬರುವಾಗ ಕನ್ನಡವನ್ನು ಸಂಪೂರ್ಣವಾಗಿ ಕಲಿತು ಬರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: RJ Rachana: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಖ್ಯಾತಿಯ ಆರ್​ಜೆ ರಚನಾ

ರಕ್ಷಿತ್​ ಸಿನಿಮಾದಲ್ಲಿ ನಟಿಸಿದ್ದ ಆರ್​ಜೆ ರಚನಾಗೆ ಹೃದಯಾಘಾತ; ಮನೆಯಲ್ಲಿದ್ದಾಗಲೇ ಕಾಣಿಸಿಕೊಂಡಿತ್ತು ಎದೆನೋವು

Published on: Feb 22, 2022 04:09 PM