ಕಾರುಣ್ಯ ರಾಮ್ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್

Edited By:

Updated on: Jan 15, 2026 | 3:03 PM

ಕಾರುಣ್ಯ ರಾಮ್ ಸಹೋದರಿ ಸಮೃದ್ಧಿ ರಾಮ್ ಅವರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಕೊಟ್ಟವರು ಹಣ ವಾಪಸ್ ಕೇಳಿದ್ದಕ್ಕೆ ಕಾರುಣ್ಯ ರಾಮ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಅವರಿಗೆ ಸಾಲ ನೀಡಿರುವ ಪ್ರಜ್ವಲ್ ಟಿವಿ9 ಜತೆ ಮಾತಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿ ರಾಮ್ (Samruddhi Ram) ಅವರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಕೊಟ್ಟವರು ಹಣ ವಾಪಸ್ ಕೇಳಿದ್ದಕ್ಕೆ ಕಾರುಣ್ಯ ರಾಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಅವರಿಗೆ ಸಾಲ ನೀಡಿರುವ ಪ್ರಜ್ವಲ್ ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಲ ಪಡೆಯುವಾಗ ಒಂದು ಮಾತು ಹೇಳಿದ್ದರು. ಅಕ್ಕನ ಮುಖ ನೋಡಿ ಸಾಲ ಕೊಡಿ ಎಂದಿದ್ದರು. ಅದಕ್ಕಾಗಿಯೇ ನಾನು ಕಾರುಣ್ಯ ರಾಮ್ (Karunya Ram) ಅವರಿಗೆ ಫೋನ್ ಮಾಡಿ ಹಣ ಕೇಳಿದೆ. ಅವರು ಜೋರಾಗಿ ಮಾತನಾಡಿದರು. ಈಗ ಸಮೃದ್ಧಿ ರಾಮ್ ಅವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣ ವಾಪಸ್ ಕೊಟ್ಟರು. ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿಕೊಂಡರು. ನಂಬರ್ ಬ್ಲಾಕ್ ಮಾಡಿದರು’ ಎಂದು ಪ್ರಜ್ವಲ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.