ಕಾಲ್ತುಳಿತದಿಂದ ಮೃತಪಟ್ಟ ಪುಟ್ಟ ಕಂದನನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿಬಂದ ಅಪ್ಪ; ಹೃದಯ ವಿದ್ರಾವಕ ವಿಡಿಯೋ ಇಲ್ಲಿದೆ

Updated on: Sep 29, 2025 | 11:24 AM

ಕರೂರ್ ಕಾಲ್ತುಳಿತದಲ್ಲಿ ಅನೇಕ ಭಾವುಕ ಘಟನೆಗಳು ನಡೆದಿವೆ. ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಆಸ್ಪತ್ರೆಯ ವಾರ್ಡ್‌ಗೆ ಎತ್ತಿಕೊಂಡು ಬರುತ್ತಿರುವ ಹೃದಯ ವಿದ್ರಾವಕ ವಿಡಿಯೋ ಸೆರೆಯಾಗಿದೆ. ನಟ-ರಾಜಕಾರಣಿ ವಿಜಯ್ ಮತ್ತು ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿದ್ದ ರಾಜಕೀಯ ರ್ಯಾಲಿಯು 40 ಜನರನ್ನು ಬಲಿ ಪಡೆದಿದೆ.

ಚೆನ್ನೈ, ಸೆಪ್ಟೆಂಬರ್ 29: ಶನಿವಾರ ಕರೂರ್​​ನಲ್ಲಿ ನಡೆದ ಕಾಲ್ತುಳಿತದಲ್ಲಿ (Karur Stampede) 40 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಈ ದುರಂತ ಕಾಲ್ತುಳಿತದ ನಂತರ, ತಮಿಳುನಾಡಿನ ಕರೂರ್ ಜನರಲ್ ಆಸ್ಪತ್ರೆಗೆ ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಅಪ್ಪಿಕೊಂಡು ಗೋಳಾಡುತ್ತಾ ಓಡಿಬಂದಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ನಟ-ರಾಜಕಾರಣಿ ವಿಜಯ್ ಮತ್ತು ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿದ್ದ ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಿದ್ದ 40 ಜನರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಅದರಲ್ಲಿ 10 ಮಕ್ಕಳು ಮತ್ತು 17 ಮಹಿಳೆಯರು ಕೂಡ ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ