ಉಕ್ಕಿ ಹರಿದ ಭೀಮೆ: ಯಾದಗಿರಿ ತುಂಬೆಲ್ಲ ನೀರೇ ನೀರು
ಮಹಾರಾಷ್ಟ್ರದಿಂದ ಭೀಮಾ ನದಿಗೆ 5 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವ ಕಾರಣ ಭೀಮಾ ನದಿ ಉಕ್ಕಿಹರಿದು ಯಾದಗಿರಿ ನಗರದ ವಿವಿಧ ಭಾಗಗಳಿಗೆ ಪ್ರವಾಹದ ನೀರು ನುಗ್ಗಿದೆ. ನದಿ ತೀರದಿಂದ 1.5 ಕಿಲೋ ಮೀಟರ್ ದೂರದ ವರೆಗೂ ನೀರು ವ್ಯಾಪಿಸಿದ್ದು, ಮನೆಗಳಿಗೆ ಜಲ ದಿಗ್ಬಂಧನ ಉಂಟಾಗಿದೆ. ದಿನ ಬಳಕೆ ವಸ್ತುಗಳು, ದವಸ ಧಾನ್ಯಗಳು ನೀರಲ್ಲಿ ಕೊಚ್ಚಿ ಹೋಗಿವೆ.
ಯಾದಗಿರಿ, ಸೆಪ್ಟೆಂಬರ್ 29: ಭೀಮಾ ನದಿ ಉಕ್ಕಿಹರಿದ ಪರಿಣಾಮ ಯಾದಗಿರಿ (Yadgir) ನಗರದ ಗ್ರೀನ್ ಸಿಟಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಗೆ ಬರಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳ ಮೇಲೆಯೇ ಮೂರ್ನಾಲ್ಕು ಅಡಿಯಷ್ಟು ನೀರು ಆವರಿಸಿಕೊಂಡಿದೆ. ಖಾಸಗಿ ಶಾಲೆ, ಬಿಜೆಪಿ ಜಿಲ್ಲಾ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸೇರಿದಂತೆ ಹತ್ತಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಸಮಸ್ಯೆಯಾಗಿದೆ. ಮನೆಯಲ್ಲಿನ ದಿನ ಬಳಕೆ ವಸ್ತುಗಳು, ದವಸ ಧಾನ್ಯಗಳು ನೀರಲ್ಲಿ ಕೊಚ್ಚಿ ಹೋಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
