ಉತ್ತರ ಕನ್ನಡ ಜಿಲ್ಲೆಯ ಗಡಿಗೂ ಹಬ್ಬಿದ ಭಾಷಾ ವಿವಾದ: ಮರಾಠಿ ಸಿನಿಮಾ ಪೋಸ್ಟರ್​ಗೆ ಮಸಿ ಬಳಿದ ಕರವೇ ಕಾರ್ಯಕರ್ತರು

ಉತ್ತರ ಕನ್ನಡ ಜಿಲ್ಲೆಯ ಗಡಿಗೂ ಹಬ್ಬಿದ ಭಾಷಾ ವಿವಾದ: ಮರಾಠಿ ಸಿನಿಮಾ ಪೋಸ್ಟರ್​ಗೆ ಮಸಿ ಬಳಿದ ಕರವೇ ಕಾರ್ಯಕರ್ತರು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 18, 2022 | 8:36 PM

ಮರಾಠಿ ಸಿನಿಮಾ ಪೋಸ್ಟರ್​ಗೆ ಮಸಿ ಬಳಿದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ನಡೆದಿದೆ. ಅಲ್ಲಿಗೆ ಉತ್ತರ ಕನ್ನಡ ಜಿಲ್ಲೆಯ ಗಡಿಗೂ ಭಾಷಾ ವಿವಾದ ಹಬ್ಬಿದಂತ್ತಾಗಿದೆ.

ಕಾರವಾರ: ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಮರಾಠಿ ಸಿನಿಮಾ ಪೋಸ್ಟರ್ (Marathi movie poster) ​ಗೆ ಮಸಿ ಬಳಿದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ನಡೆದಿದೆ. ಅಲ್ಲಿಗೆ ಉತ್ತರ ಕನ್ನಡ ಜಿಲ್ಲೆಯ ಗಡಿಗೂ ಭಾಷಾ ವಿವಾದ ಹಬ್ಬಿದಂತ್ತಾಗಿದೆ. ಕನ್ನಡ ಸಿನಿಮಾ ಪೋಸ್ಟರ್ ಕೆಳಭಾಗದಲ್ಲಿ ಹಾಕಿ ಮೇಲ್ಭಾಗದಲ್ಲಿ ಮರಾಠಿ ಸಿನಿಮಾ ಪೋಸ್ಟರ್​ನ್ನು ಚಿತ್ರಮಂದಿರ ಮಾಲೀಕರು ಅಳವಡಿಸಿದ್ದಾರೆ. ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠಿ ಸಿನಿಮಾ ಪೋಸ್ಟರ್​​  ತೆಗೆಸಿ ಮಸಿ ಬಳಿದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published on: Dec 18, 2022 08:35 PM