ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿದ ಪ್ರಯಾಣಿಕ: ರೈಲ್ವೆ ಸಿಬ್ಬಂದಿಯಿಂದ ಬಚಾವ್
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಚಲಿಸುತ್ತಿದ್ದ ರೈಲನ್ನು ಓಡಿ ಹೋಗಿ ಹತ್ತುವ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ಸಮಯಪ್ರಜ್ಞೆಯಿಂದ ರೈಲು ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಪ್ರಯಾಣಿಕ ರೈಲಿನಡಿ ಸಿಲುಕುತ್ತಿರುವ ವೇಳೆ ರೈಲ್ವೆ ಸಿಬ್ಬಂದಿ ಯೋಗೀಶ್ ನಾಯ್ಕ ಸಮಯಪ್ರಜ್ಞೆ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದದೆ.
ಕಾರವಾರ, ನವೆಂಬರ್ 24: ಚಲಿಸುತ್ತಿದ್ದ ರೈಲನ್ನು (train) ಓಡಿ ಹೋಗಿ ಹತ್ತುವ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ಸಮಯಪ್ರಜ್ಞೆಯಿಂದ ರೈಲು ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಗೋವಾ ಮಡ್ಗಾವ್ನಿಂದ ಎರ್ನಾಕುಲಂ ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಿಂತಿದೆ. ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಇಳಿದು ತಮಗೆ ಬೇಕಾದ ತಂಪು ಪಾನೀಯಗಳನ್ನ ಖರೀದಿಸುತ್ತಿದ್ದರು. ಇದೇ ವೇಳೆ ರೈಲು ಹೊರಟಿದೆ. ಕೆಲವು ಪ್ರಯಾಣಿಕರು ಓಡುತ್ತಾ ರೈಲು ಹತ್ತಿದರೆ ಓರ್ವ ಪ್ರಯಾಣಿಕ ಮಾತ್ರ ರೈಲನ್ನು ಹತ್ತುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಪ್ರಯಾಣಿಕ ರೈಲಿನಡಿ ಸಿಲುಕುತ್ತಿರುವ ವೇಳೆ ರೈಲ್ವೆ ಸಿಬ್ಬಂದಿ ಯೋಗೀಶ್ ನಾಯ್ಕ ಸಮಯಪ್ರಜ್ಞೆ ಮೆರೆದಿದ್ದಾರೆ. ಪ್ರಯಾಣಿಕನ ರಕ್ಷಣೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದದೆ. ಯೋಗೀಶ್ ನಾಯ್ಕ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.