ಕೆಸಿಸಿಯಿಂದ ನಟರಿಗಾಗುವ ಪ್ರಯೋಜನವೇನು? ಸುದೀಪ್ ಕೊಟ್ಟರು ಸರಿಯಾದ ಉತ್ತರ
Kichcha Sudeep: ಸೆಲೆಬ್ರಿಟಿಗಳು ಸೇರಿ ಆಡುವ ಕೆಸಿಸಿ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಟೂರ್ನಿ ನಡೆಯಲಿದೆ. ಈ ಟೂರ್ನಿಯ ಅತಿ ದೊಡ್ಡ ಪ್ರಯೋಜನದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಸೆಲೆಬ್ರಿಟಿಗಳೆಲ್ಲ ಸೇರಿ ಕ್ರಿಕೆಟ್ (Cricket) ಆಡುವ ಆಟವನ್ನು ಸಂಭ್ರಮಿಸುವ ಕೆಸಿಸಿ ಕ್ರಿಕೆಟ್ ಟೂರ್ನಿ ಈ ವರ್ಷ ಮತ್ತೆ ಬಂದಿದೆ. ನಟರು ಕ್ರಿಕೆಟ್ ಆಡುವುದರಿಂದ ಏನು ಪ್ರಯೋಜನ ಎಂದು ಕೆಲವರು ಕೊಂಕು ನುಡಿಯುವುದುಂಟು, ಆದರೆ ಕೆಸಿಸಿಯಿಂದ ನಟರಿಗೆ ಆಗುವ ದೊಡ್ಡ ಪ್ರಯೋಜನ, ಬದಲಾವಣೆ ಬಗ್ಗೆ ಸುದೀಪ್ (Kichcha Sudeep) ಮಾತನಾಡಿದ್ದಾರೆ. ಕೆಸಿಸಿಯಿಂದ ನಟ-ನಟರ ಮಧ್ಯೆ ಇರುವ ಬಿರುಕು ಮಾಯವಾಗುತ್ತದೆ. ಎಲ್ಲರೂ ಒಂದೇ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಾರೆ. ಪರಸ್ಪರ ಗೆಳೆಯರಾಗುತ್ತಾರೆ, ಒಟ್ಟಿಗೆ ಆಡುತ್ತಾರೆ. ಹೊರಗೆ ಯಾರೋ ಇನ್ನೋಬ್ಬ ನಟರ ಬಗ್ಗೆ ಮಾತನಾಡಿದಾಗ, ಅಥವಾ ವೈಮನಸ್ಯ ತಂದಿಡುವ ಪ್ರಯತ್ನ ಮಾಡಿದಾಗ, ನಟರು ಪರಸ್ಪರ ಸ್ನೇಹಿತರಾಗಿರುವ ಕಾರಣ, ಪರಸ್ಪರರ ವ್ಯಕ್ತಿತ್ವ ಗೊತ್ತಿರುವ ಕಾರಣ ವೈಮನಸ್ಯಕ್ಕೆ ಅವಕಾಶವೇ ಬರುವುದಿಲ್ಲ. ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಸ್ನೇಹಮಯ ವಾತಾವರಣ ನಿರ್ಮಾಣವಾಗುತ್ತದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ

