ಮತ್ತೆ ಬ್ಯಾಟ್ ಹಿಡಿದು ಬಂದ ಕಿಚ್ಚ ಸುದೀಪ್: ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕೆಲವು ಬದಲಾವಣೆ

KCC: ಕಿಚ್ಚ ಸುದೀಪ್ ಮುನ್ನೆಲೆಯಲ್ಲಿ ನಿಂತು ಆಯೋಜಿಸುವ ಕೆಸಿಸಿ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ಈ ವರ್ಷದ ಟೂರ್ನಿಯ ಬಗ್ಗೆ ಮಾತನಾಡಿರುವ ಸುದೀಪ್, ಈ ಬಾರಿ ಏನೇನು ಭಿನ್ನತೆ ಇರಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಮತ್ತೆ ಬ್ಯಾಟ್ ಹಿಡಿದು ಬಂದ ಕಿಚ್ಚ ಸುದೀಪ್: ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕೆಲವು ಬದಲಾವಣೆ
ಸುದೀಪ್-ಕೆಸಿಸಿ
Follow us
|

Updated on: Nov 24, 2023 | 8:23 PM

ಕಿಚ್ಚ ಸುದೀಪ್​ (Sudeep) ಅವರದ್ದು ಬಹುಮುಖ ಪ್ರತಿಭೆ. ಸಿನಿಮಾ ಮಾತ್ರವೇ ಅಲ್ಲದೆ ಕ್ರೀಡೆ, ಅಡುಗೆ, ಹಾಡುಗಾರಿಕೆ, ಸಂಗೀತ ಹೀಗೆ ಹಲವು ಹವ್ಯಾಸಗಳನ್ನು ಸುದೀಪ್ ಇಟ್ಟುಕೊಂಡಿದ್ದಾರೆ. ಸಿನಿಮಾದಷ್ಟೆ ಉತ್ಕಟವಾಗಿ ಅವರು ಕ್ರಿಕೆಟ್ ಮತ್ತು ಅಡುಗೆಯನ್ನೂ ಪ್ರೀತಿಸುತ್ತಾರೆ. ಅದ್ಭುತ ಕ್ರಿಕೆಟ್ ಪ್ರೇಮಿಯಾಗಿರುವ ಸುದೀಪ್, ಚಿತ್ರರಂಗವೇ ಕ್ರಿಕೆಟ್ ಅನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಚಿತ್ರರಂಗ ಮೊದಲಿನಿಂದಲೂ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುತ್ತಾ ಆಡುತ್ತಾ ಬಂದಿದೆ. ಅದಕ್ಕೆ ಒಂದು ಶಿಸ್ತು, ದೊಡ್ಡ ಮಟ್ಟಿಗಿನ ಪ್ರಚಾರ, ಪ್ರಸಾರವನ್ನು ಸುದೀಪ್ ನೀಡಿದ್ದಾರೆ. ಸುದೀಪ್​ ಮುನ್ನೆಲೆಯಲ್ಲಿ ನಿಂತು ಆಯೋಜಿಸುವ ಕೆಸಿಸಿ ಕರ್ನಾಟಕ ಕ್ರಿಕೆಟ್ ರಂಗದಲ್ಲಿ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿದೆ. ಇದೀಗ ಈ ವರ್ಷ ಮತ್ತೆ ಕೆಸಿಸಿ ಬಂದಿದ್ದು, ಈ ಬಾರಿ ಕೆಲವು ಬದಲಾವಣೆಗಳಿವೆ.

ಈ ವರ್ಷದ ಕೆಸಿಸಿ ಟೂರ್ನಿ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ನಟ ಸುದೀಪ್, ‘‘ಈ ಬಾರಿ ಕೆಲವು ಬದಲಾವಣೆಗಳು ಇರುತ್ತವೆ. ಕಳೆದ ಬಾರಿ ಎರಡು ದಿನಗಳ ಕಾಲ ಮಾತ್ರವೇ ಟೂರ್ನಿ ನಡೆಯುತ್ತಿತ್ತು. ಇರುವ ಆರು ತಂಡಗಳಿಗೆ ತಲಾ ಎರಡು ಅಥವಾ ಮೂರು ಪಂದ್ಯಗಳಷ್ಟೆ ಆಡಲು ಸಿಗುತ್ತಿತ್ತು. ಆದರೆ ಈ ಬಾರಿ ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಹಾಗೂ ರೌಂಡ್ ರಾಬಿನ್ ವಿಧಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರತಿ ತಂಡಕ್ಕೆ ಕನಿಷ್ಟ ಆರು ಪಂದ್ಯಗಳು ಆಡಲು ಸಿಗಲಿವೆ’’ ಎಂದರು.

ಇದನ್ನೂ ಓದಿ:KCC Trophy: ಡಿಸೆಂಬರ್​ನಲ್ಲಿ ‘ಕನ್ನಡ ಚಲನಚಿತ್ರ ಕಪ್’; ಮಾಹಿತಿ ನೀಡಿದ ಕಿಚ್ಚ ಸುದೀಪ್

‘‘ರಾಜ್ಯದ ಹಲವೆಡೆ ಒಳ್ಳೆಯ ಕ್ರಿಕೆಟ್ ಪಿಚ್​ಗಳಿವೆ. ನಮಗೂ ಅಲ್ಲೆಲ್ಲ ಹೋಗಿ ಜನರ ಮುಂದೆ ಆಡಬೇಕು ಎಂಬ ಆಸೆಯಿದೆ ಆದರೆ ಆ ಗ್ರೌಂಡ್​ಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಹಲವು ಸ್ಟಾರ್​ಗಳು ಒಂದೆಡೆ ಸೇರುವ ಕಾರಣ ದೊಡ್ಡ ಸಂಖ್ಯೆಯ ಜನ ಹರಿದು ಬರುತ್ತಾರೆ. ಅವರನ್ನೆಲ್ಲ ಕಂಟ್ರೋಲ್ ಮಾಡುವುದು ಆ ಗ್ರೌಂಡ್​ಗಳಲ್ಲಿ ಕಷ್ಟವಾಗುತ್ತದೆ. ಮುಂದೆ ಮೂಲಸೌಕರ್ಯಗಳು ಆ ಗ್ರೌಂಡ್​ಗಳಲ್ಲಿ ಹೆಚ್ಚಾದಾಗ ಬೇರೆ ನಗರಗಳಿಗೂ ಬಂದು ಆಡುತ್ತೇವೆ’’ ಎಂದಿದ್ದಾರೆ ಸುದೀಪ್.

‘‘ಈ ಬಾರಿಯೂ ಸಹ ವಿದೇಶಿ ಆಟಗಾರರು ನಮ್ಮ ತಂಡಗಳಲ್ಲಿ ಆಡಲಿದ್ದಾರೆ ಎಂದಿರುವ ಸುದೀಪ್, ಈ ಬಾರಿ ಕೆಲವು ಟಿವಿ ನಟರು ಸಹ ತಂಡಗಳನ್ನು ಸೇರಿಕೊಂಡಿದ್ದಾರೆ. ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಸಹ ತಂಡಗಳನ್ನು ಸೇರಿಕೊಂಡಿದ್ದಾರೆ. ಈ ಬಾರಿ ಹೆಚ್ಚಿನ ಆಕ್ಷನ್ ಅನ್ನು, ಹೆಚ್ಚು ಜಿದ್ದಾ-ಜಿದ್ದಿನ ಪಂದ್ಯಗಳನ್ನು ನಿರೀಕ್ಷಿಸಬಹುದು. ಕೆಲವೇ ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಆ ಹರಾಜು ಪ್ರಕ್ರಿಯೆಯ ಲೈವ್ ಅನ್ನು ಯೂಟ್ಯೂಬ್ ಹಾಗೂ ಟಿವಿಗಳಲ್ಲಿ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ’’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ