‘ಹಿಂದೆಂದಿಗೂ ನೋಡದ ವಿಸ್ಮಯ ಕಣ್ತುಂಬಿಕೊಳ್ಳಿ’; ‘ಕಾಂತಾರ 2’ ಬಗ್ಗೆ ಬಿಗ್ ಅಪ್ಡೇಟ್
Kantara Chapter 1: ‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಗೆದ್ದಿದ್ದರು. ಎರಡು ಶೇಡ್ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
‘ಕಾಂತಾರ’ ಸಿನಿಮಾ (Kantar Movie) ರಿಲೀಸ್ ಆಗಿ ವರ್ಷದ ಮೇಲಾಗಿದೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಸಿನಿಮಾ ಶೂಟಿಂಗ್ ಶುರುವಿನ ಬಗ್ಗೆ ಆಗೊಂದು, ಈಗೊಂದು ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಯಾವುದೂ ಅಧಿಕೃತ ಆಗಿರಲಿಲ್ಲ. ಈಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿದೆ. ‘ಕಾಂತಾರ 2’ ಚಿತ್ರದ ಫಸ್ಟ್ ಪೋಸ್ಟರ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಗೆದ್ದಿದ್ದರು. ಎರಡು ಶೇಡ್ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ದೈವ ಬಂದಂತೆ ಆಡುವಾಗ ಅವರ ಹಾವ-ಭಾವ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದರು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ. ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ನವೆಂಬರ್ 27, ಮಧ್ಯಾಹ್ನ 12:25ಕ್ಕೆ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.
ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ 🔥
Step into the sacred echoes of the past, where divinity weaves through every frame. Stay enchanted for a glimpse into… pic.twitter.com/jiuwyqQRaP
— Hombale Films (@hombalefilms) November 25, 2023
ಇದನ್ನೂ ಓದಿ: ‘ಕಾಂತಾರ 2’ಗಾಗಿ ಗೆಟಪ್ ಬದಲಿಸಿದ ರಿಷಬ್ ಶೆಟ್ಟಿ?
ಟೈಟಲ್ ಕಾರ್ಡ್ನಲ್ಲಿ ಕೇವಲ ‘ಕಾಂತಾರ’ ಎಂದಷ್ಟೇ ಇದೆ. ‘ಕಾಂತಾರ ಚಾಪ್ಟರ್ 1’ ಎಂದು ಹ್ಯಾಶ್ಟ್ಯಾಗ್ ಹಾಕಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ಅವರ ಹೊಸ ಅವತಾರ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದಕ್ಕೆ ಸೋಮವಾರದವರೆಗೆ ಕಾಯಲೇಬೇಕು.
‘ಕಾಂತಾರ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ನಲ್ಲಿ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Sat, 25 November 23