ಸುಂದರಿ ಕತ್ರೀನಾ ಕೈಫ್​ರನ್ನು ಮದುಮಗಳಾಗಿ ಇನ್ನಷ್ಟು ಸುಂದರಗೊಳಿಸಿದ್ದು ಡಿಸೈನರ್ ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಉಡುಪುಗಳು!

ಸುಂದರಿ ಕತ್ರೀನಾ ಕೈಫ್​ರನ್ನು ಮದುಮಗಳಾಗಿ ಇನ್ನಷ್ಟು ಸುಂದರಗೊಳಿಸಿದ್ದು ಡಿಸೈನರ್ ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಉಡುಪುಗಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2021 | 4:29 PM

ಕತ್ರೀನಾ ಅವರಿಗೆ ಹೂವುಗಳ ಪ್ರಿಂಟ್ ಇರುವ ಬಟ್ಟೆಗಳು ಬಹಳ ಇಷ್ಟವಾಗುತ್ತವೆ. ಅದು ಸೀರೆಯಾಗಿರಲೀ ಅಥವಾ ಡ್ರೆಸ್ ಅದರ ಮೇಲೆ ಹೂವುಗಳಿರುವುದನ್ನು (ಫ್ಲೋರಲ್ ಪ್ರಿಂಟ್ಸ್) ಅವರು ಇಷ್ಟಪಡುತ್ತಾರೆ.

ನೀಳ ಮತ್ತು ಎತ್ತ್ತರ ಕಾಯದ ಸುಂದರಿ ಕತ್ರೀನಾ ಕೈಫ್ ಮತ್ತು ಸುಂದರಾಂಗ ಹಾಗೂ ಕಟ್ಟುಮಸ್ತು ಆಳ್ತನದ ಪ್ರತಿಭಾವಂತ ನಟ ವಿಕ್ಕಿ ಕೌಶಲ್ ಅವರ ಬಹು ಚರ್ಚಿತ ವಿವಾಹ ಮಹೋತ್ಸವವು ಸವಾಯಿ ಮಾಧೊಪುರನಲ್ಲಿರುವ ಸಿಕ್ಸ್ ಸೆನ್ಸಸ್ ಬರ್ವಾರಾ ಕೋಟೆಯಲ್ಲಿ ನಡೆಯುತ್ತಿದೆ. ಅವರಿಬ್ಬರು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸತಿಪತಿಗಳಾಗಿ ದಾಂಪತ್ಯ ಬದುಕನ್ನು ಗುರುವಾರದಿಂದ ಆರಂಭಿಸಲಿರುವುದು ನಿಜವಾದರೂ, ಈ ದಿನಕ್ಕಾಗಿ ತಯಾರಿಗಳು ಬಹಳ ದಿನಗಳಿಂದ ನಡೆದಿದ್ದವು. ಕತ್ರೀನಾ ಸುಮಾರು ಎರಡು ದಶಕಗಳಿಂದ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಮದುವೆಯಾಗುತ್ತಿರುವ ಸುದ್ದಿ ಕೇಳಿ ಅದೆಷ್ಟು ಜನರ ಹೃದಯ ಒಡೆದು ಚೂರಾಗಿದೆಯೋ?

ಕತ್ರೀನಾ ಮದುವೆ ದಿನದಂದು ಯಾವ ಬಗೆಯ ಉಡುಗೆ ತೊಡುತ್ತಾರೆ, ಅದಕ್ಕೆ ಮುಂಚಿನ (ಪ್ರಿ-ವೆಡ್ಡಿಂಗ್) ಕಾರ್ಯಕ್ರಮಗಳಲ್ಲಿ ಏನೆಲ್ಲ ಧರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸೆಲಿಬ್ರಿಟಿ ಫ್ಯಾಶನ್ ಡಿಸೈನರ್ ಎನಿಸಿಕೊಂಡಿರುವ ಮತ್ತು ಅನುಷ್ಕಾ ಶರ್ಮ ಹಾಗೂ ದೀಪಿಕಾ ಪಡುಕೋಣೆ ಅವರ ಮದುವೆ ಉಡುಪುಗಳನ್ನು ವಿನ್ಯಾಸಗೊಳಿಸಿದ ಸವ್ಯಸಾಚಿ ಮುಖರ್ಜಿಯೇ ಕತ್ರೀನಾ ಅವರಿಗೂ ಲಗ್ನದ ಉಡುಪುಗಳನ್ನು ತಯಾರಿಸಿಕೊಟ್ಟಿದ್ದಾರೆ.

ಸವ್ಯಸಾಚಿ ಅವರಲ್ಲಿರುವ ಬ್ರೈಡಲ್ ಕಲೆಕ್ಷನ್ ನಿಂದ ಬಹಳ ಪ್ರಭಾವಿತಳಾಗಿರುವುದಾಗಿ ಖುದ್ದು ಕತ್ರೀನಾ ಹೇಳಿದ್ದರು. ಅವರ ಧರಿಸಿರುವ ಉಡಉಪುಗಳನ್ನು ನೋಡಿ ನೀವು ವ್ಹಾವ್ ಅನ್ನದಿರಲಾರಿರಿ.

ಕತ್ರೀನಾ ಅವರಿಗೆ ಹೂವುಗಳ ಪ್ರಿಂಟ್ ಇರುವ ಬಟ್ಟೆಗಳು ಬಹಳ ಇಷ್ಟವಾಗುತ್ತವೆ. ಅದು ಸೀರೆಯಾಗಿರಲೀ ಅಥವಾ ಡ್ರೆಸ್ ಅದರ ಮೇಲೆ ಹೂವುಗಳಿರುವುದನ್ನು (ಫ್ಲೋರಲ್ ಪ್ರಿಂಟ್ಸ್) ಅವರು ಇಷ್ಟಪಡುತ್ತಾರೆ. ಅವರ ಇನ್ಸ್ಟಾಗ್ರಾಮ್ ಪೋಸ್ಟ್​ಗಳನ್ನು  ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಅದನ್ನು ಗಮನದಲ್ಲಿಟ್ಟುಕೊಂಡೇ ಸವ್ಯಸಾಚಿ, ಕತ್ರೀನಾ ಅವರ ಮದುವೆ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಸೂರ್ಯವಂಶಿ ಚಿತ್ರದ ಪ್ರಮೋಶನಲ್ಲಿ ಕತ್ರೀನಾ ಧರಿಸಿದ್ದ ಕೆಂಪು ವರ್ಣದ ಪ್ಲೋರಲ್ ಪ್ರಿಂಟೆಡ್ ಲೆಹೆಂಗಾವನ್ನು ಸಹ ಸವ್ಯಸಾಚಿ ಡಿಸೈನ್ ಮಾಡಿದ್ದರು.

ಕತ್ರೀನಾ-ವಿಕ್ಕಿ ಮದುವೆ ಮಂಟಪವನ್ನು ಸಹ ಹೂಗಳ ಥೀಮ್​ನಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರೀ-ವೆಡ್ಡಿಂಗ್ ಈವೆಂಟ್​ಗಳಲ್ಲಿ  ಅವರು ತೊಟ್ಟಿರುವ ಉಡುಪುಗಳ ಝಲಕ್ ಈ ವಿಡಿಯೋನಲ್ಲಿದೆ. ನೀವು ಕತ್ರೀನಾ ಅವರ ಅಭಿಮಾನಿ ಅಲ್ಲದಿದ್ದರೂ ಆಕರ್ಷಣೆಗೊಳಗಾಗಿ ಬಿಡುತ್ತೀರಿ!

ಇದನ್ನೂ ಓದಿ:  ಝೂಮ್​ ವಿಡಿಯೋ ಕಾಲ್​ನಲ್ಲಿ 900ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದ ವಿಧಾನಕ್ಕೆ ವಿಶಾಲ್​ ಗರ್ಗ್ ಕ್ಷಮೆ