ಡಿಸ್ಟ್ರಿಬ್ಯೂಟರ್ ಬಂದು ಇನ್ನೂ ಎಕ್ಸ್ಪೋಸ್ ಮಾಡಬಹುದಿತ್ತು ಎಂದಿದ್ರು; ಕವಿತಾ ಲಂಕೇಶ್
ನಿರ್ದೇಶಕಿ ಕವಿತಾ ಲಂಕೇಶ್ ಅವರು ಚಿತ್ರರಂಗವನ್ನು ಸಾಕಷ್ಟು ಹತ್ತಿರದಿಂದ ನೋಡಿದವರು. ಸಿನಿಮಾ ನಿರ್ದೇಶನದಲ್ಲಿ ಸಾಕಷ್ಟು ವಿಚಾರಗಳನ್ನು ಕಂಡುಕೊಂಡಿದ್ದಾರೆ.
ನಿರ್ದೇಶಕಿ ಕವಿತಾ ಲಂಕೇಶ್ ಅವರು ಚಿತ್ರರಂಗವನ್ನು ಸಾಕಷ್ಟು ಹತ್ತಿರದಿಂದ ನೋಡಿದವರು. ಸಿನಿಮಾ ನಿರ್ದೇಶನದಲ್ಲಿ ಸಾಕಷ್ಟು ವಿಚಾರಗಳನ್ನು ಕಂಡುಕೊಂಡಿದ್ದಾರೆ. ಅವರ ಸಿನಿ ಜರ್ನಿಯ ಅನುಭವಗಳನ್ನು ಟಿವಿ9 ಕನ್ನಡ ಡಿಜಿಟಲ್ ಜತೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
‘ಸಿನಿಮಾದಲ್ಲಿ ನಾನು ದೃಶ್ಯವೊಂದನ್ನು ಕಂಪೋಸ್ ಮಾಡಿದ್ದೆ. ಸಿನಿಮಾ ನೋಡಿದ ಡಿಸ್ಟ್ರಿಬ್ಯೂಟರ್, ಇನ್ನೂ ಎಕ್ಸ್ಪೋಸ್ ಮಾಡಬಹುದಿತ್ತು ಎಂದಿದ್ದರು. ನನಗೆ ಅಸಹ್ಯ ಎನಿಸಿತು. ಎಕ್ಸ್ಪೋಸ್ ಮಾಡುವ ವಿಚಾರಕ್ಕೆ ನನ್ನ ವಿರೋಧವಿಲ್ಲ. ಆದರೆ, ಅನಗತ್ಯ ಕಡೆಗಳಲ್ಲಿ ಅದನ್ನು ತುರುಕೋದು ನನಗೆ ಇಷ್ಟವಿಲ್ಲ’ ಎಂದಿದ್ದಾರೆ ಕವಿತಾ. ಇದರ ಜತೆಗೆ ಸಿನಿಮಾವೊಂದರಲ್ಲಿ ಕಿಸ್ಸಿಂಗ್ ದೃಶ್ಯ ಇಟ್ಟ ಬಗ್ಗೆಯೂ ವಿರೋಧ ವ್ಯಕ್ತವಾಗಿತ್ತಂತೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದನ್ನು ಓದಿ: ‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್ ಆಗಿತ್ತು’; ಶೂಟಿಂಗ್ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್