ಗುಂಡಿಟ್ಟು ಸಾಯಿಸೋದಲ್ಲ, ನಮ್ಮದು ಗಣರಾಜ್ಯ ದೇಶ, ಕೋರ್ಟ್ ನೋಡಿಕೊಳ್ಳುತ್ತದೆ; ಕವಿತಾ ಲಂಕೇಶ್
ಅತ್ಯಾಚಾರ ಅಪರಾಧಿಗಳನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿರ್ದೇಶಕಿ ಕವಿತಾ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಸಿಗುತ್ತಿಲ್ಲ ಎನ್ನುವ ಕೂಗು ಜೋರಾಗಿದೆ. ಈ ಮಧ್ಯೆ ಅತ್ಯಾಚಾರ ಅಪರಾಧಿಗಳನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿರ್ದೇಶಕಿ ಕವಿತಾ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಟಿವಿ9 ಕನ್ನಡ ಡಿಜಿಟಲ್ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕವಿತಾ ಅವರು, ‘ಅತ್ಯಾಚಾರಿಗಳನ್ನು ಗುಂಡಿಟ್ಟು ಸಾಯಿಸಬೇಕು ಎನ್ನುವ ಕೂಗು ಜೋರಾಗಿದೆ. ಆದರೆ, ನಮ್ಮದು ಗಣರಾಜ್ಯ ದೇಶ. ಅವರು ಕಣ್ಣು ಕಿತ್ತರು ಎಂದರೆ, ನಾವೂ ಹೋಗಿ ಕಣ್ಣು ಕೀಳಲು ಆಗುವುದಿಲ್ಲ. ಇಲ್ಲಿ ಪೊಲೀಸರಿದ್ದಾರೆ, ಕೋರ್ಟ್ ಇದೆ. ನ್ಯಾಯಾಲಯ ಎಲ್ಲವನ್ನೂ ನೋಡಿಕೊಳ್ಳುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ’ ಆಗುತ್ತದೆ ಎಂದಿದ್ದಾರೆ.
Loading...
Unable to load recommendations.
Follow Us
