ಬಿಗ್ ಬಾಸ್ ಮನೆಯಲ್ಲಿ ಅಸಲಿ ಮುಖ ತೋರಿಸಿದ ಕಾವ್ಯ ಶೈವ: ಶಾಕ್ ಆದ ಅಶ್ವಿನಿ

Updated on: Oct 14, 2025 | 4:22 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಮಿಡ್ ಸೀಸನ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ. ದೊಡ್ಮನೆಯಲ್ಲಿ ಇರುವ ಮಹಿಳಾ ಸ್ಪರ್ಧಿಗಳು ಚುರುಕಾಗಿದ್ದಾರೆ. ನಟಿ ಕಾವ್ಯ ಶೈವ ಈಗ ತಮ್ಮ ಅಸಲಿ ಮುಖ ತೋರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋನಲ್ಲಿ ಮಿಡ್ ಸೀಸನ್ ಫಿನಾಲೆ ಹತ್ತಿರ ಆಗಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ಹೆಣ್ಮಕ್ಕಳು ಚುರುಕಾಗಿದ್ದಾರೆ. ನಟಿ ಕಾವ್ಯ ಶೈವ (Kavya Shaiva) ಅವರು ತಮ್ಮ ಅಸಲಿ ಮುಖ ತೋರಿಸಿದ್ದಾರೆ. ಅವರ ಆಟದ ತಂತ್ರಗಾರಿಕೆ ಕಂಡು ಅಶ್ವಿನಿ (Ashwini SN) ಅವರಿಗೆ ಶಾಕ್ ಆಗಿದೆ. ಅಕ್ಟೋಬರ್ 14ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಅಕ್ಟೋಬರ್ 18 ಮತ್ತು 19ರಂದು ಮಿಡ್ ಸೀಸನ್ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.