AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಾಂತಿ ಅಲ್ಲದಿದ್ದರೆ ವಾಂತಿ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ರಾ?: ವಿಪಕ್ಷ ನಾಯಕ ಆರ್​.ಅಶೋಕ್​ ಕಿಡಿ

ಕ್ರಾಂತಿ ಅಲ್ಲದಿದ್ದರೆ ವಾಂತಿ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ರಾ?: ವಿಪಕ್ಷ ನಾಯಕ ಆರ್​.ಅಶೋಕ್​ ಕಿಡಿ

ಕಿರಣ್​ ಹನಿಯಡ್ಕ
| Updated By: ಪ್ರಸನ್ನ ಹೆಗಡೆ|

Updated on: Oct 14, 2025 | 5:17 PM

Share

ರಾಜ್ಯ ರಾಜಕೀಯದಲ್ಲಿ ನವೆಂಬರ್​ ಕ್ರಾಂತಿ ಆಗೋದು ಫಿಕ್ಸ್​. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಸಚಿವರ ಡಿನ್ನರ್​ ಮೀಟಿಂಗ್​ ಕರೆದಿದ್ದರು ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಆರೋಪಿಸಿದ್ದಾರೆ. ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಚಿಂತನೆ ವಿಚಾರವಾಗಿಯೂ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 14: ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಧಮ್​ ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣಿಸುತ್ತಿಲ್ಲ. ಇವರನ್ನು ವಜಾ ಮಾಡುವ ಅಧಿಕಾರ ಇರುವ ಗವರ್ನರ್, ರಾಷ್ಟ್ರಪತಿ ಕೂಡಾ ಆರೆಸ್ಸೆಸ್ಸಿನವರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್ (R. Ashok) ​ ಹೇಳಿದ್ದಾರೆ. ರಾಜ್ಯದಲ್ಲಿರೋದು ಬಿದ್ದು ಹೋಗುವ ಸರ್ಕಾರ. ಕ್ರಾಂತಿ ಇರುವುದಕ್ಕೇ ಡಿನ್ನರ್ ಮೀಟಿಂಗ್ ಮಾಡಿರೋದು. ಇಲ್ಲದಿದ್ದರೆ ಇನ್ನೇನು ವಾಂತಿ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ರಾ? ಎಂದು ಅವರು ಪ್ರಶ್ನಿಸಿದ್ದು, ನಾವು ಹೇಳಿದ ಕ್ರಾಂತಿ ಈಗ ಕಾಂಗ್ರೆಸ್​ ನಲ್ಲಿ ಶುರುವಾಗಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.