ಅ.18, 19ರಂದು ‘ಬಿಗ್ ಬಾಸ್ ಕನ್ನಡ 12’ ಮೊದಲ ಫಿನಾಲೆ: ಆಟದಲ್ಲಿ ಭಾರಿ ಟ್ವಿಸ್ಟ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಮೊದಲ ಫಿನಾಲೆಗೆ ದಿನಗಣನೆ ಶುರುವಾಗಿದೆ. ಮಿಡ್ ಸೀಸನ್ ಫಿನಾಲೆಯ ದಿನಾಂಕ ಹಾಗೂ ಪ್ರಸಾರದ ಸಮಯದ ಬಗ್ಗೆ ಮಾಹಿತಿ ನೀಡಲಾಗಿದೆ. ಹಲವರು ಎಲಿಮಿನೇಟ್ ಆಗಲಿದ್ದಾರೆ. 3ನೇ ವಾರದ ಫಿನಾಲೆಯಲ್ಲಿ ಗೆದ್ದವರಿಗೆ ಬಹುಮಾನ ಸಿಗಲಿದೆ.

ಈ ಬಾರಿ ಬಿಗ್ ಬಾಸ್ (Bigg Boss Kannada) ಆಟದಲ್ಲಿ ಹಲವು ಟ್ವಿಸ್ಟ್ ನೀಡಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಶೋನಲ್ಲಿ ಒಂದೇ ಫಿನಾಲೆ ಇರುತ್ತಿತ್ತು. ಆದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಎರಡು ಫಿನಾಲೆಯನ್ನು ಪರಿಚಯಿಸಲಾಗಿದೆ. ಮೂರನೇ ವಾರದಲ್ಲಿ ಮೊದಲ ಫಿನಾಲೆ ಬರಲಿದೆ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದರು. ಅದರ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ವಿವರ ನೀಡಿದೆ. ಇದನ್ನು ಮಿಡ್ ಸೀಸನ್ ಫಿನಾಲೆ (Mid Season Finale) ಎಂದು ಕರೆಯಲಾಗುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಮೊದಲ ಫಿನಾಲೆ ನಡೆಯಲಿದೆ. ಪ್ರಸಾರದ ಸಮಯದ ಬಗ್ಗೆ ಇಲ್ಲಿದೆ ವಿವರ..
ಪ್ರತಿ ವರ್ಷದ ಫಿನಾಲೆ ರೀತಿಯೇ ಮಿಡ್ ಸೀಸನ್ ಫಿನಾಲೆ ಕೂಡ ನಡೆಯಲಿದೆ. ಅಕ್ಟೋಬರ್ 18 ಮತ್ತು 19ರಂದು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ರಾತ್ರಿ 8 ಗಂಟೆಯಿಂದ 11 ಗಂಟೆ ತನಕ ಮಿಡ್ ವೀಕ್ ಫಿನಾಲೆ ಪ್ರಸಾರ ಆಗಲಿದೆ. ಈ ಸಂಚಿಕೆಗಳಲ್ಲಿ ಹಲವು ತಿರುವುಗಳು ಎದುರಾಗಲಿವೆ. ಏನೆಲ್ಲ ಇರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
‘Expect The Unexpected’ ಎಂಬುದು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನ ಥೀಮ್ ಆಗಿದೆ. ಆ ಕಾರಣದಿಂದ ಹಲವು ರೋಚಕತೆ ಇರಲಿದೆ. ಮಿಡ್ ವೀಕ್ ಫಿನಾಲೆಯಲ್ಲಿ ಸಾಕಷ್ಟು ಅನಿರೀಕ್ಷಿತ ಸಂಗತಿಗಳು ಎದುರಾಗಲಿವೆ. ಸ್ಪರ್ಧಿಗಳಿಗೆ, ವೀಕ್ಷಕರಿಗೆ ಹಾಗೂ ಕಿಚ್ಚ ಸುದೀಪ್ ಅವರಿಗೆ ಕೂಡ ಮಿಡ್ ಸೀಸನ್ ಫಿನಾಲೆ ಎಂಬುದು ಹೊಸ ವಿಷಯ. ಹಾಗಾಗಿ ಕೌತುಕ ಹೆಚ್ಚಿದೆ.
ಮೂರನೇ ವಾರಕ್ಕೆ ಮಿಡ್ ಫಿನಾಲೆ ನಡೆಯುತ್ತಿದ್ದು, ಈ ಫಿನಾಲೆಯಲ್ಲಿ ಭಾರೀ ಎಲಿಮಿನೇಷನ್ ನಡೆಯಲಿದೆ. ಅಲ್ಲದೇ, ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ. ಹೊಸ ಸ್ಪರ್ಧಿಗಳ ಆಗಮನದಿಂದ ಬಿಗ್ ಬಾಸ್ ಆಟಕ್ಕೆ ಹೊಸ ಉತ್ಸಾಹ, ಹುಮ್ಮಸ್ಸು ಹಾಗೂ ತಿರುವು ಸಿಗಲಿದೆ. ಬರುವ ಹೊಸ ಸ್ಪರ್ಧಿಗಳು ಯಾರು ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: ಮೂರನೇ ವಾರದ ಫಿನಾಲೆಯಲ್ಲಿ ಅರ್ಧದಷ್ಟು ಮಂದಿ ಬಿಗ್ ಬಾಸ್ನಿಂದ ಔಟ್; ಬರಲಿದೆ ಹೊಸ ಬ್ಯಾಚ್
ಕೊನೆಯ ಫಿನಾಲೆ ರೀತಿಯೇ ಮಿಡ್ ಸೀಸನ್ ಫಿನಾಲೆಯಲ್ಲಿ ಕೂಡ ವಿನ್ನರ್ ಯಾರು ಎಂಬುದನ್ನು ಘೋಷಿಸಲಾಗುತ್ತದೆ. ಗೆದ್ದವರಿಗೆ ಬಹುಮಾನ ಸಹ ಕೊಡಲಾಗುತ್ತದೆ. ಈ ಸಂಚಿಕೆಗಳಲ್ಲಿ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಇರಲಿದೆ. ಕೆಲವು ಸೆಲೆಬ್ರಿಟಿಗಳು ಸಹ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಈ ಎಲ್ಲದರಿಂದ ಮಿಡ್ ಸೀಸನ್ ಫಿನಾಲೆಯಲ್ಲಿ ಭರ್ಜರಿ ಮನರಂಜನೆ ಇರಲಿದೆ. 6 ಗಂಟೆಗಳ ಕಾಲ ಮಿಡ್ ಸೀಸನ್ ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




