CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

Updated on: Jun 24, 2026 | 3:53 PM

ಮುಖ್ಯಾಂಶಗಳು

  • ಸಿಇಟಿ ಆಪ್ಷನ್ ಎಂಟ್ರಿ ಗೊಂದಲದ ಬಗ್ಗೆ KEA ನಿರ್ದೇಶಕ ಪ್ರಸನ್ನ ಸ್ಪಷ್ಟನೆ
  • ವೈದ್ಯಕೀಯ ಸೀಟು ಕಾಯುವ ವಿದ್ಯಾರ್ಥಿಗಳಿಗೆ ಕೆಇಎ ನಿರ್ದೇಶಕ ಪ್ರಸನ್ನ ಸಲಹೆ
  • ನೀಟ್ ವಿಳಂಬದಿಂದ ಸಿಇಟಿ ಪ್ರವೇಶಾತಿ ಮೇಲೆ ಪರಿಣಾಮ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ ಆಪ್ಷನ್ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ನೀಟ್ ಫಲಿತಾಂಶ ವಿಳಂಬದಿಂದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಆಪ್ಷನ್ ಎಂಟ್ರಿ ಮುಂದೂಡಲಾಗಿದೆ. ವೈದ್ಯಕೀಯದ ಜೊತೆಗೆ ಇಂಜಿನಿಯರಿಂಗ್ ಪ್ರವೇಶವನ್ನೂ ಬಯಸುವ ವಿದ್ಯಾರ್ಥಿಗಳು ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

ನೀಟ್ ಪರೀಕ್ಷೆಗಳು ವಿಳಂಬವಾಗಿರುವುದರಿಂದ, ಮೆಡಿಕಲ್, ಡೆಂಟಲ್ ಮತ್ತು ಆಯುಷ್ ಕೋರ್ಸ್‌ಗಳ ಸೀಟು ಹಂಚಿಕೆ ಎರಡನೇ ಸುತ್ತಿನಲ್ಲಿ ನಡೆಯಲಿದೆ. ಎಂಸಿಸಿ ಮತ್ತು ಮೆಡಿಕಲ್ ಎಜುಕೇಶನ್ ವಿಭಾಗದಿಂದ ಸೀಟ್ ಮ್ಯಾಟ್ರಿಕ್ಸ್ ಲಭ್ಯವಾದ ನಂತರ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ

ವೈದ್ಯಕೀಯ ಸೀಟು ಮಾತ್ರ ಬಯಸುವ ವಿದ್ಯಾರ್ಥಿಗಳು ಎರಡನೇ ಸುತ್ತಿಗಾಗಿ ಕಾಯಬಹುದು. ಆದರೆ, ವೈದ್ಯಕೀಯ ಸೀಟು ದೊರೆಯದಿದ್ದಲ್ಲಿ ಇಂಜಿನಿಯರಿಂಗ್ ಅಥವಾ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಭಾಗವಹಿಸಬೇಕು ಎಂದು ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ. ಹೀಗೆ ಭಾಗವಹಿಸಿದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಆಯ್ಕೆಗಳನ್ನು ಸೇರಿಸಿ ಪುನರ್ವ್ಯವಸ್ಥೆ ಮಾಡಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಕೆಇಎ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವ್ಯವಸ್ಥೆಯನ್ನು ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published on: Jun 24, 2026 03:51 PM
Follow Us