Athirapilly Waterfalls: ಮಳೆಗೆ ರೌದ್ರ ರೂಪ ತಾಳಿದ ಕೇರಳದ ಅತಿರಪಿಲ್ಲಿ ಜಲಪಾತ

|

Updated on: Jul 30, 2024 | 4:45 PM

ಅತಿರಪಿಲ್ಲಿ ಜಲಪಾತವು ಕೇರಳದ ತ್ರಿಶೂರ್ ಜಿಲ್ಲೆಯ ಚಾಲಕುಡಿ ತಾಲೂಕಿನ ವಲಿ ಅತಿರಪಿಲ್ಲಿ ಪಂಚಾಯತ್‌ನಲ್ಲಿದೆ. ಇದು ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ ಹುಟ್ಟುವ ಚಲಕುಡಿ ನದಿಯ ಮೇಲಿದೆ. ಇದು ಕೇರಳದ ಅತಿದೊಡ್ಡ ಜಲಪಾತವಾಗಿದ್ದು, 81.5 ಅಡಿ ಎತ್ತರದಲ್ಲಿದೆ. ಮಳೆಗಾಲವಾದ್ದರಿಂದ ಈ ಜಲಪಾತ ಮೈದುಂಬಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿದೆ.

ಅತಿರಪಿಲ್ಲಿ ಜಲಪಾತವು ಕೇರಳದ ಅತಿದೊಡ್ಡ ಜಲಪಾತವಾಗಿದೆ. ಇದನ್ನು “ದಕ್ಷಿಣ ಭಾರತದ ನಯಾಗರಾ” ಎಂದು ಕೂಡ ಕರೆಯಲಾಗುತ್ತದೆ. ಮಳೆಗಾಲದಲ್ಲಿ ಅತಿರಪಿಲ್ಲಿ ಜಲಪಾತ ರೌದ್ರಾವತಾರ ತಾಳಿ ಧುಮ್ಮಿಕ್ಕುತ್ತದೆ. ಕೇರಳದಲ್ಲಿ ಭಾರೀ ಮಳೆಯಿಂದಾಗಿ ವಯನಾಡು, ತ್ರಿಶೂರ್ ಸೇರಿದಂತೆ ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗುತ್ತಿದೆ. ಈ ನಡುವೆ ಅತಿರಪಿಲ್ಲಿ ಜಲಪಾತಕ್ಕೆ ಜೀವಕಳೆ ಬಂದಿದೆ. ಕೇರಳದ ಅತ್ಯಂತ ಜನಪ್ರಿಯ ಜಲಪಾತವಾದ ಅತಿರಪಿಲ್ಲಿಯಲ್ಲಿ ಬಲವಾದ ಪ್ರವಾಹದ ನೀರಿನ ಮೂಲಕ ಬಂಡೆಗಳು ಕೆಳಗೆ ಬೀಳುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಸಂಭವಿಸಿದ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತಗಳ ಸರಣಿಯಲ್ಲಿ ಸುಮಾರು 90 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಸಿಕ್ಕಿಬಿದ್ದಿದ್ದಾರೆ. ಭೂಕುಸಿತ, ಪ್ರವಾಹದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂತಹ ವಿಡಿಯೋಗಳ ಮಧ್ಯೆ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಅತಿರಪಿಲ್ಲಿ ಜಲಪಾತದ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ