AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ರಾಮ್​, ಮೈಸೂರು
| Edited By: |

Updated on: Nov 15, 2026 | 12:48 PM

Share

ಮುಖ್ಯಾಂಶಗಳು

  • ನಂಜನಗೂಡಿನ ಬಾಳೆ ತೋಟದಲ್ಲಿ ಡ್ರಗ್ಸ್ ದಂಧೆ
  • ಪ್ರಗತಿಪರ ರೈತನ ಕರಾಳ ಮುಖ ಬಯಲು
  • 720 ಗ್ರಾಂ ಎಂಡಿಎಂಎ ಹಾಗೂ 800 ಎಂಎಲ್ ಹ್ಯಾಶ್ ಆಯಿಲ್ ವಶಕ್ಕೆ

ಕೇರಳದ ಪ್ರಶಸ್ತಿ ವಿಜೇತ ಯುವ ರೈತನೊಬ್ಬ ನಂಜನಗೂಡಿನಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಾಳೆಗಿಡದಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಪೊಲೀಸರು ಇತನನ್ನು ಬಂಧಿಸಿದ್ದಾರೆ. 720 ಗ್ರಾಂ ಎಂಡಿಎಂಎ ಮತ್ತು 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಳ್ಳಲಾಗಿದ್ದು, ಮೈಸೂರು ಡ್ರಗ್ಸ್ ಜಾಲದ ಸುರಕ್ಷಿತ ತಾಣವಾಗುವ ಆತಂಕ ಹೆಚ್ಚಿದೆ.

ಮೈಸೂರು, ನವೆಂಬರ್​​ 15: ಕೇರಳದಲ್ಲಿ ಪ್ರಗತಿಪರ ಯುವ ರೈತ ಎಂದು ಪ್ರಶಸ್ತಿ ಪಡೆದು, ನೂರಾರು ಯುವಕರಿಗೆ ಕೃಷಿ ಸ್ಪೂರ್ತಿಯಾಗಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ ಎಂಬಾತ ಇದೀಗ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ಬಂಧನದಿಂದ ಮೈಸೂರಿನಲ್ಲಿ ಡ್ರಗ್ಸ್ ಜಾಲದ ಮತ್ತೊಂದು ಮುಖ ಬಯಲಾಗಿದೆ. ನಂಜನಗೂಡಿನ ಕುರಿಹುಂಡಿ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದಿದ್ದ ಧನೇಶ್ ಬಾಳೆ ಗಿಡ ಬೆಳೆದಿದ್ದ. ಇದೇ ಬಾಳೆ ಗೊನೆಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟ ಮಾಡುತ್ತಿದ್ದ. ಕೇರಳ ಪೊಲೀಸರು ಕಾರ್ಯಾಚರಣೆ ನಡೆಸಿ 720 ಗ್ರಾಂ ಎಂಡಿಎಂಎ ಹಾಗೂ 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಂಡಿದ್ದು, ವಿಡಿಯೋವನ್ನು ಕೇರಳ ಪೊಲೀಸರು ಬಿಡುಗಡೆ ಮಾಡಿದ್ದಾರೆ. ರೈತರು ಅಪರಿಚಿತರಿಗೆ ಜಮೀನು ಗುತ್ತಿಗೆ ನೀಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More