AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ಕೇಶವ್ ಮಹಾರಾಜ್: ಸೌತ್ ಆಫ್ರಿಕಾಗೆ ಅಮೋಘ ಜಯ

26 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ಕೇಶವ್ ಮಹಾರಾಜ್: ಸೌತ್ ಆಫ್ರಿಕಾಗೆ ಅಮೋಘ ಜಯ

ಝಾಹಿರ್ ಯೂಸುಫ್
|

Updated on: Aug 20, 2025 | 7:28 AM

Share

Australia vs South Africa: 297 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೊದಲ ವಿಕೆಟ್​ಗೆ 60 ರನ್​ಗಳಿಸಿ ಉತ್ತಮ  ಆರಂಭ ಪಡೆದುಕೊಂಡಿತ್ತು. ಆದರೆ ಈ ಹಂತದಲ್ಲಿ ದಾಳಿಗಿಳಿದ ಕೇಶವ್ ಮಹಾರಾಜ್ ಆಸೀಸ್ ಪಡೆಗೆ ಆಘಾತದ ಮೇಲೆ ಆಘಾತ ನೀಡಿದರು. ಅದರಲ್ಲೂ ಕೇವಲ 26 ಎಸೆತಗಳಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಸೌತ್ ಆಫ್ರಿಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 40.5 ಓವರ್​ಗಳಲ್ಲಿ 198 ರನ್​ಗಳಿಸಿ ಆಲೌಟ್ ಆಯಿತು.

ಕೈರ್ನ್ಸ್​ನ ಕಝಲಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಕೇಶವ್ ಮಹಾರಾಜ್. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ (82), ಟೆಂಭಾ ಬವುಮಾ (65) ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್​ ಕಲೆಹಾಕಿತು.

297 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೊದಲ ವಿಕೆಟ್​ಗೆ 60 ರನ್​ಗಳಿಸಿ ಉತ್ತಮ  ಆರಂಭ ಪಡೆದುಕೊಂಡಿತ್ತು. ಆದರೆ ಈ ಹಂತದಲ್ಲಿ ದಾಳಿಗಿಳಿದ ಕೇಶವ್ ಮಹಾರಾಜ್ ಆಸೀಸ್ ಪಡೆಗೆ ಆಘಾತದ ಮೇಲೆ ಆಘಾತ ನೀಡಿದರು. ಅದರಲ್ಲೂ ಕೇವಲ 26 ಎಸೆತಗಳಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಸೌತ್ ಆಫ್ರಿಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 40.5 ಓವರ್​ಗಳಲ್ಲಿ 198 ರನ್​ಗಳಿಸಿ ಆಲೌಟ್ ಆಯಿತು.

ಈ ಮೂಲಕ ಸೌತ್ ಆಫ್ರಿಕಾ ತಂಡವು 98 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಸೌತ್ ಆಫ್ರಿಕಾ ಪರ 10 ಓವರ್​ಗಳನ್ನು ಎಸೆದ ಕೇಶವ್ ಮಹಾರಾಜ್ ಕೇವಲ 33 ರನ್ ನೀಡಿ 5 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.