AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜೆ-ಕೆಜಿ ಹಳ್ಳಿ ಪ್ರಕರಣ: ಬೆಂಕಿ ಹಚ್ಚಿದ್ಯಾರು? DCP ಶರಣಪ್ಪ ನೀಡಿದ್ದಾರೆ ಫ್ರೇಂ-ಟು-ಫ್ರೇಂ ಮಾಹಿತಿ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಬೆಂಕಿ ಹಚ್ಚಿದ್ಯಾರು? ಕಾರಣ ಏನು ಅನ್ನೋ ಚರ್ಚೆ ನಡೆಯುವಾಗ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬರೋಬ್ಬರಿ 4,900 ವಿಡಿಯೋ ಕ್ಲಿಪ್‌ಗಳು ಘಟನೆ ಬಗ್ಗೆ ಸಾಕ್ಷ್ಯ ಹೇಳುತ್ತಿವೆ. 422 ಆರೋಪಿಗಳು.. ಮೂರು ಸ್ಥಳಗಳು.. 72 ಪ್ರಕರಣ.. 4,900 ವಿಡಿಯೋ ಕ್ಲಿಪ್‌ಗಳು.. ಇದು ಬೆಂಗಳೂರು ಬೆಂಕಿಯ ಡಿಟೇಲ್ಸ್‌.. ಡಿಜೆ ಹಳ್ಳಿ, ಕೆಜಿ ಹಳ್ಳಿ ಹೊತ್ತಿ ಉರಿದಿದ್ದು ಹೇಗೆ ಅನ್ನೋ ಡಿಟೇಲ್ಸ್‌ . ಹೌದು.. […]

ಡಿಜೆ-ಕೆಜಿ ಹಳ್ಳಿ ಪ್ರಕರಣ: ಬೆಂಕಿ ಹಚ್ಚಿದ್ಯಾರು? DCP ಶರಣಪ್ಪ ನೀಡಿದ್ದಾರೆ ಫ್ರೇಂ-ಟು-ಫ್ರೇಂ ಮಾಹಿತಿ
ಆಯೇಷಾ ಬಾನು
| Edited By: |

Updated on:Oct 31, 2020 | 10:51 AM

Share

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಬೆಂಕಿ ಹಚ್ಚಿದ್ಯಾರು? ಕಾರಣ ಏನು ಅನ್ನೋ ಚರ್ಚೆ ನಡೆಯುವಾಗ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬರೋಬ್ಬರಿ 4,900 ವಿಡಿಯೋ ಕ್ಲಿಪ್‌ಗಳು ಘಟನೆ ಬಗ್ಗೆ ಸಾಕ್ಷ್ಯ ಹೇಳುತ್ತಿವೆ.

422 ಆರೋಪಿಗಳು.. ಮೂರು ಸ್ಥಳಗಳು.. 72 ಪ್ರಕರಣ.. 4,900 ವಿಡಿಯೋ ಕ್ಲಿಪ್‌ಗಳು.. ಇದು ಬೆಂಗಳೂರು ಬೆಂಕಿಯ ಡಿಟೇಲ್ಸ್‌.. ಡಿಜೆ ಹಳ್ಳಿ, ಕೆಜಿ ಹಳ್ಳಿ ಹೊತ್ತಿ ಉರಿದಿದ್ದು ಹೇಗೆ ಅನ್ನೋ ಡಿಟೇಲ್ಸ್‌ . ಹೌದು.. ಆವತ್ತು ಬೆಂಕಿ ಹಚ್ಚಿದ್ದು ಯಾರು? ಬಂಧನವಾದ ಆರೋಪಿಗಳ ಸಂಖ್ಯೆ ಎಷ್ಟು? ಬೆಂಕಿ ಎಲ್ಲಿಂದ ಹೊತ್ತಿಕೊಳ್ತು ಅನ್ನೋ ಡಿಟೇಲ್ಸ್‌ ಟಿವಿ9 ಗೆ ಲಭ್ಯವಾಗಿದೆ. ಡಿಸಿಪಿ ಡಾ. ಶರಣಪ್ಪ ಈ ಬಗ್ಗೆ ಟಿವಿ9 ಗೆ ಫ್ರೇಂ-ಟು-ಫ್ರೇಮ್ ಮಾಹಿತಿ ನೀಡಿದ್ದಾರೆ.

72 ಪ್ರಕರಣ.. 422 ಆರೋಪಿಗಳು ಅರೆಸ್ಟ್‌! ಡಿ.ಜೆ ಹಳ್ಳಿ-ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಾಥಮಿಕ ಚಾರ್ಜ್‌ಶೀಟ್‌ನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೂರ್ವ ವಿಭಾಗದ ಪೊಲೀಸರು, ಸದ್ಯ ಆರು ಕೇಸ್‌ನಲ್ಲಿ ನ್ಯಾಯಾಲಯಕ್ಕೆ ಮೊದಲ ಹಂತದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಘಟನೆ ಸಂಬಂಧ ಒಟ್ಟು 72 ಪ್ರಕರಣ ದಾಖಲಾಗಿದ್ದು, ಇದುವರೆಗೆ 422 ಆರೋಪಿಗಳನ್ನ ಅರೆಸ್ಟ್‌ ಮಾಡಲಾಗಿದೆ.

ಬೆಂಕಿಯ ಆರಂಭ! ಫೇಸ್‌ಬುಕ್‌ನಲ್ಲಿ ಎರಡು ಧರ್ಮಗಳ ಬಗ್ಗೆ ಅವಹೇಳನವಾಗ್ತಿತ್ತು. ಈ ವೇಳೆ ನವೀನ್‌ ಧಾರ್ಮಿಕ ಭಾವನೆ ಕೆರಳುವಂತೆ ಕಮೆಂಟ್‌ ಮಾಡಿದ್ದ. ಕಮೆಂಟ್‌ ನೋಡಿ ಗರಂ ಆದ ಮೀನು ಮಾರುವ ಯುವಕ, ಆರೋಪಿಗಳಾದ ಸೈಯದ್, ಮುಕ್ಬುಲ್, ಶೇಕ್ ಮುನೀರ್,‌ ಸಂಪತ್‌ರಾಜ್‌ ಆಪ್ತ ಅರುಣ್‌ ಜತೆ ಚರ್ಚಿಸಿದ್ರು.

ಈ ವೇಳೆ ಸಂಪತ್‌ರಾಜ್ ಆಪ್ತ ಅರುಣ್‌ ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದ. ಇದ್ರಿಂದ ಪ್ರೇರಿತರಾದ ಆರೋಪಿಗಳು ಗುಂಪು ಕಟ್ಟಿಕೊಂಡು ನವೀನ್ ಮನೆ ಬಳಿಗೆ ಹೋಗಿದ್ರು. ನವೀನ್ ಮನೆ ಧ್ವಂಸ ಮಾಡಿ ಮನೆ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ್ರು. ಪೊಲೀಸ್‌ ಠಾಣೆಗಳ ಮುಂದೆ ಕೂಡಾ ಇದೇ ರೀತಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ರು.

ಹೀಗೆ ಆರೋಪಿಗಳು ಬೆಂಕಿ ಹಾಕಿದ್ದರ ಬಗ್ಗೆ ಸಿಸಿಟಿವಿ ಮೂಲಕ ಬರೋಬ್ಬರಿ 4,900 ವಿಡಿಯೋ ಕ್ಲಿಪ್‌ಗಳನ್ನ ಸಂಗ್ರಹಿಸಿದ್ದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಒಟ್ನಲ್ಲಿ ಡಿಜೆಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ವಿಡಿಯೋ ಸಾಕ್ಷ್ಯಗಳ ಮೂಲಕವೇ ಆರೋಪಿಗಳನ್ನ ಅರೆಸ್ಟ್‌ ಮಾಡಿರೋ ಪೊಲೀಸರು ಕೋರ್ಟ್‌ಗೆ ಪ್ರಾಥಮಿಕ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

Published On - 11:11 am, Fri, 30 October 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ