‘ಕೆಜಿಎಫ್ 2’ ಮೊದಲ ಶಾಟ್ ನೋಡೇ ಫಿದಾ ಆಗಿದ್ದರು ಸಂಜಯ್ ದತ್
‘ಕೆಜಿಎಫ್’ ಚಿತ್ರದಲ್ಲಿ ಭುವನ್ ಅವರ ಛಾಯಾಗ್ರಹಣ ಹೈಲೈಟ್ ಆಗಿತ್ತು. ‘ಕೆಜಿಎಫ್ 2’ ಚಿತ್ರದಲ್ಲೂ ಅವರ ಸಿನಿಮಾಟೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ.
‘ಕೆಜಿಎಫ್ ಚಾಪ್ಟರ್ 2’ (KGF Chapter 2) ಈ ಮಟ್ಟದಲ್ಲು ಹೈಪ್ ಪಡೆದುಕೊಂಡಿದೆ ಎಂದರೆ ಎಲ್ಲರ ಪರಿಶ್ರಮವೂ ಇದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಹೇಳಿದ್ದರು. ಇದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಸಿನಿಮಾ ಶೂಟಿಂಗ್ನಲ್ಲಿ ಬಹುತೇಕರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ‘ಕೆಜಿಎಫ್ 2’ ಛಾಯಾಗ್ರಾಹಕ ಭುವನ್ ಗೌಡ (Bhuvan Gowda) ಕೂಡ ಇದೇ ಮಾತನ್ನು ಹೇಳಿದ್ದಾರೆ. ‘ನಮ್ಮ ಸೆಟ್ನಲ್ಲಿ ಯಾರೊಬ್ಬರೂ ಸುಮ್ಮನೆ ಕೂರುತ್ತಿರಲಿಲ್ಲ. ಎಲ್ಲರೂ ಅವರವರ ಕೆಲಸ ಮಾಡುತ್ತಿರುತ್ತಿದ್ದರು. ಸಂಜಯ್ ದತ್ ಅವರು ಮೊದಲ ಶಾಟ್ ನೋಡಿದ್ದರು. ಅವರು ಆ ದೃಶ್ಯವನ್ನು ನೋಡಿ ಖುಷಿಪಟ್ಟರು. ನೀವು ಎಷ್ಟೊಂದು ಶ್ರಮವಹಿಸುತ್ತಿದ್ದೀರಿ ಎಂಬುದಾಗಿ ಮೆಚ್ಚುಗೆ ಸೂಚಿಸಿದ್ದರು’ ಎಂದಿದ್ದಾರೆ ಭುವನ್ ಗೌಡ. ‘ಕೆಜಿಎಫ್’ ಚಿತ್ರದಲ್ಲಿ ಭುವನ್ ಅವರ ಛಾಯಾಗ್ರಹಣ ಹೈಲೈಟ್ ಆಗಿತ್ತು. ‘ಕೆಜಿಎಫ್ 2’ ಚಿತ್ರದಲ್ಲೂ ಅವರ ಸಿನಿಮಾಟೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ.
ಇದನ್ನೂ ಓದಿ: ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ ‘ಕೆಜಿಎಫ್ 2’ ಟಿಕೆಟ್ ದರ? ಇಲ್ಲಿದೆ ವಿವರ
‘ಕೆಜಿಎಫ್ 2’ ಜತೆ ಅಟ್ಯಾಚ್ ಆಗಿ ಬರಲಿದೆ ಎರಡು ಕನ್ನಡ ಚಿತ್ರಗಳ ಟೀಸರ್; ಗುಡ್ ನ್ಯೂಸ್ ಕೊಟ್ಟ ಹೊಂಬಾಳೆ ಫಿಲ್ಮ್ಸ್