ಹಣ್ಣಿನಂಗಡಿ ಮೇಲೆ ನಡೆದ ದಾಂಧಲೆ ಅರೋಪದಲ್ಲಿ ಬಂಧನಕ್ಕೊಳಗಾಗಿರುವ ತಮ್ಮ ಕಾರ್ಯಕರ್ತರನ್ನು ಮುತಾಲಿಕ್ ಭೇಟಿಯಾದರು
ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಹೊರಬಂದ ಮುತಾಲಿಕ್ ಅವರು ಮಾಧ್ಯಮಗಳ ಜೊತೆ ಮಾತಾಡಿದರು. ಘಟನೆ ನಡೆದಾಗ ನಬಿಸಾಬ್ ಅವರು ಅಂಗಡಿಯಲ್ಲೇ ಇರಲಿಲ್ಲ ಎಂದು ತಮ್ಮ ಕಾರ್ಯಕರ್ತರು ತಿಳಿಸಿದರೆಂದು ಮುತಾಲಿಕ್ ಹೇಳಿದರು.
ಧಾರವಾಡ: ಎರಡು ದಿನಗಳ ಹಿಂದೆ ಧಾರವಾಡದ ನುಗ್ಗೇಕೇರಿಯ ಹನುಮನ ದೇವಸ್ಥಾನದ ಅವರಣದಲ್ಲಿ ಕಲ್ಲಂಗಡಿ ಹಣ್ಣಿನ (watermelon) ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ, ವ್ಯಾಪಾರಿ ನಬಿ ಸಾಬ್ (Nabi Sab) ಅವರ ಮೇಲೆ ಹಲ್ಲೆ ನಡೆಸಿ ಅಂಗಡಿಯಲ್ಲಿದ್ದ ಹಣ್ಣುಗಳನ್ನು ರಸ್ತೆ ಮೇಲೆ ಚೆಲ್ಲಿ ಒಡೆದುಹಾಕಿ ದಾಂಧಲೆ ನಡೆಸಿದ ಆರೋಪದಲ್ಲಿ ಪೋಲಿಸರಿಂದ ಬಂಧಿಸಲ್ಪಟ್ಟಿರುವ ಶ್ರೀರಾಮ ಸೇನೆ (Sriram Sene) ಕಾರ್ಯಕರ್ತರನ್ನು ಭೇಟಿಯಾಗಲು ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮಂಗಳವಾರ ನಗರದ ಸಬ್ ಜೈಲಿಗೆ ಆಗಮಿಸಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪೊಲೀಸರು ಮೈಲಾರಪ್ಪ, ಮಹಾಲಿಂಗ, ಕುಮಾರ ಮತ್ತು ಚಿದಾನಂದ ಹೆಸರಿನ ನಾಲ್ವರು ಆರೋಪಿಗಳಿನ್ನು ಬಂಧಿಸಿದ್ದಾರೆ. ಹಣ್ಣಿನ ವ್ಯಾಪಾರಿ ನಬಿಸಾಬ್ ಅವರು ದೂರು ಸಲ್ಲಿಸಿದ ಬಳಿಕ ಪೊಲೀಸರು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಹೊರಬಂದ ಮುತಾಲಿಕ್ ಅವರು ಮಾಧ್ಯಮಗಳ ಜೊತೆ ಮಾತಾಡಿದರು. ಘಟನೆ ನಡೆದಾಗ ನಬಿಸಾಬ್ ಅವರು ಅಂಗಡಿಯಲ್ಲೇ ಇರಲಿಲ್ಲ ಎಂದು ತಮ್ಮ ಕಾರ್ಯಕರ್ತರು ತಿಳಿಸಿದರೆಂದು ಮುತಾಲಿಕ್ ಹೇಳಿದರು. ಅವರು ಒಂದು ಪಕ್ಷ ಅಲ್ಲಿರದಿದ್ದರೂ, ಕಲ್ಲಂಗಡಿ ಹಣ್ಣಿನ ಅಂಗಡಿ ನಬಿ ಸಾಬ್ ಅವರದ್ದೇ ಆಗಿರುವುದರಿಂದ ದೂರು ಕೊಟ್ಟಿರುವ ಬಗ್ಗೆ ಯಾಕೆ ಮುತಾಲಿಕ್ ಅವರು ಯಾಕೆ ಆಕ್ಷೇಪಣೆ ಎತ್ತುತ್ತಿದ್ದಾರೆ ಅನ್ನೋದು ಗೊತ್ತಾಗಲ್ಲ ಮಾರಾಯ್ರೇ.
ತಮ್ಮ ಕಾರ್ಯಕರ್ತರೊಂದಿಗೆ ಮಾತಾಡಿರುವುದಾಗಿ ಹೇಳಿದ ಮುತಾಲಿಕ್ ಅವರು ಸಬ್ ಜೈಲಲ್ಲಿರುವ ಬೇರೆ ಕೈದಿಗಳು ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಜೈಲರ್ ಮಧ್ಯಪ್ರವೇಶಿಸಿ ಹೆದರಿಸಿದ ಕೈದಿಗಳನ್ನು ಗದರಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ: ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರ; ಯುವ ಕಾಂಗ್ರೆಸ್‌ನಿಂದ ನಬಿಸಾಬ್‌ಗೆ 25 ಸಾವಿರ ರೂ. ನೆರವು