‘ಕೆಜಿಎಫ್’ ಚಿತ್ರಕ್ಕೆ ಆಯ್ಕೆ ಆದ ಕಥೆ ಬಿಚ್ಚಿಟ್ಟ ನಟಿ ಶ್ರೀನಿಧಿ ಶೆಟ್ಟಿ
ಎರಡು ಪಾರ್ಟ್ಗಾಗಿ ಅವರು ಆರು ವರ್ಷ ಮೀಸಲಿಟ್ಟಿದ್ದಾರೆ. ಈ ಬಗ್ಗೆಯೂ ಶ್ರೀನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.
ಶ್ರೀನಿಧಿ ಶೆಟ್ಟಿ ( Srinidhi Shetty) ಅವರು ‘ಕೆಜಿಎಫ್’ (KGF) ಸರಣಿಯ ನಾಯಕಿ. ಇದು ಅವರ ಮೊದಲ ಸಿನಿಮಾ. ಈ ರೀತಿಯ ದೊಡ್ಡ ಬಜೆಟ್ ಚಿತ್ರಗಳಲ್ಲಿ ನಟಿಸೋಕೆ ಅನುಭವಿ ಕಲಾವಿದರಿಗೆ ಅವಕಾಶ ನೀಡಲಾಗುತ್ತದೆ. ಆದರೆ, ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಆ ರೀತಿ ಮಾಡಿಲ್ಲ. ಹೊಸ ಪ್ರತಿಭೆಗೆ ಅವಕಾಶ ನೀಡಿದರು. ರೀನಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಶ್ರೀನಿಧಿ ಶೆಟ್ಟಿ. ‘ಕೆಜಿಎಫ್ 2’ ಚಿತ್ರದಲ್ಲೂ ರೀನಾ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಈ ಸಿನಿಮಾಗೆ ಅವರು ಆಯ್ಕೆ ಆಗಿದ್ದು ಹೇಗೆ ಎಂಬ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ಶ್ರೀನಿಧಿ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಪಾರ್ಟ್ಗಾಗಿ ಅವರು ಆರು ವರ್ಷ ಮೀಸಲಿಟ್ಟಿದ್ದಾರೆ. ಈ ಬಗ್ಗೆಯೂ ಶ್ರೀನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
Latest Videos