Roopakala Shashidhar: ಕುಂದುಕೊರತೆ ಸಭೆಗೆ ಬೈಕ್ ನಲ್ಲಿ ಬಂದ ಕೆಜಿಎಫ್ ಶಾಸಕಿ ರೂಪಕಲಾ!
Public Grievance meeting: ಕೆಜಿಎಫ್ ಮಾರಿಕುಪ್ಪಂ ವಾರ್ಡ್ ನಲ್ಲಿ ಕುಂದುಕೊರತೆ ಸಭೆಗೆಂದು ಬರುವ ವೇಳೆ ಕೆಜಿಎಫ್ ಶಾಸಕಿ ಕಾರ್ ಬಿಟ್ಟು, ಬೈಕ್ ಏರಿ ಬಂದಿದ್ದು ಗಮನಾರ್ಹವಾಗಿತ್ತು.
ಕೋಲಾರ ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ (Roopakala Shashidhar) ಅವರು ಇಂದು ನಡೆದ ಕುಂದುಕೊರತೆ ಸಭೆಗೆ (Public Grievance meeting) ಮಾರಿಕುಪ್ಪಂ ಬಡಾವಣೆಯಲ್ಲಿ ಬೈಕ್ ನಲ್ಲಿ ರೌಂಡ್ಸ್ ಬಂದರು. ಇತ್ತೀಚೆಗೆ ನಿರ್ಮಿಸಲಾಗಿರುವ ನೂತನ ರಸ್ತೆಯಲ್ಲಿ ಬೈಕ್ ನಲ್ಲೇ ಓಡಾಡಿ ವೀಕ್ಷಣೆ ಕಾರ್ಯ ಮಾಡಿದರು. ಮಾರಿಕುಪ್ಪಂ ವಾರ್ಡ್ ನಲ್ಲಿ ಕುಂದುಕೊರತೆ ಸಭೆಗೆಂದು ಬರುವ ವೇಳೆ ಕೆಜಿಎಫ್ ಶಾಸಕಿ (KGF Congress MLA) ಕಾರ್ ಬಿಟ್ಟು, ಬೈಕ್ ಏರಿ ಬಂದಿದ್ದು ಗಮನಾರ್ಹವಾಗಿತ್ತು.