ಕಾರ್ಯಕರ್ತರ ಮನೆ ಮೇಲೆ ಅಧಿಕಾರಿಗಳಿಂದ ನಡೆಯುತ್ತಿರುವ ದಾಳಿ ವಿರೋಧಿಸಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಪ್ರತಿಭಟನೆ
ಕಳೆದ ವಾರ ಗೋದಾಮಿನ ಮೇಲೆ ದಾಳಿ ನಡೆಸಿ ಫುಡ್ಕಿಟ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಅದಾದ ಬಳಿಕ ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ರೂಪಾ ಹೇಳಿದರು.
ಕೋಲಾರ: ಕಾಂಗ್ರೆಸ್ ಪಕ್ಷದ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ (Roopa Shashidhar) ಶುಕ್ರವಾರದಂದು ಬೇತಮಂಗಲ ಪೊಲೀಸ್ ಠಾಣೆ (Betha Mangala police station) ಎದುರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಅವರೇ ಹೇಳುವ ಪ್ರಕಾರ ಅಧಿಕಾರಿಗಳಿಂದ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಕಿರುಕುಳ ದಿನೇದಿನ ಹೆಚ್ಚುತ್ತಿದೆ. ಯುಗಾದಿ ಹಬ್ಬಕ್ಕೆ (Ugadi festival) ಜನರ ನಡುವೆ ಹಂಚಲು ಫುಡ್ ಕಿಟ್ ಗಳನ್ನು ತರಿಸಿ ಸಂಬಂಧಿಕರೊಬ್ಬರ ಗೋದಾಮಿನಲ್ಲಿ ಇಟ್ಟಿದ್ದರಂತೆ. ಆದರೆ ಕಳೆದ ವಾರ ಗೋದಾಮಿನ ಮೇಲೆ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಅದಾದ ಬಳಿಕ ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ರೂಪಾ ಹೇಳಿದರು. ಅಧಿಕಾರಿಗಳ ಕಿರುಕುಳ ನಿಲ್ಲದ ಹೊರತು ತಮ್ಮ ಪ್ರತಿಭಟನೆ ನಿಲ್ಲದು ಎಂದು ಶಾಸಕಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos