ಸಂಬಂಧವಿರದ ವಿಷಯಗಳನ್ನು ಬಿಟ್ಟು ಕಲಬುರಗಿ ಮಕ್ಕಳ ಶಿಕ್ಷಣದ ಬಗ್ಗೆ ಖರ್ಗೆಗಳು ಯೋಚಿಸಲಿ: ಪ್ರತಾಪ್ ಸಿಂಹ
ಖರ್ಗೆಗಳು ಚುನಾವಣಾ ಆಯೋಗವನ್ನು ಪ್ರಶ್ನಿಸುವುದು ತಪ್ಪಾ ಎಂದಾಗ ಉತ್ತರಿಸಲು ತಡವರಿಸುವ ಪ್ರತಾಪ್ ಸಿಂಹ, ಕೇಳಬಾರದು ಅಂತ ಎಲ್ಲಿದೆ, ದಾಖಲೆಗಳನ್ನು ಸಲ್ಲಿಸಲಿ, ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ, ಹಿಂದೆ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ವಿರುದ್ಧ ಯಾರು ಸಿಬಿಐ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರೆಂದು ಎಲ್ಲರಿಗೂ ಗೊತ್ತಿದೆ ಎಂದು ಸಿಂಹ ಹೇಳಿದರು.
ಮೈಸೂರು, ಆಗಸ್ಟ್ 8: ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ (Priyank Kharge) ತಮಗೆ ಸಂಬಂಧವಿರದ ವಿಷಯಗಳ ಬಗ್ಗೆ ಹೆಚ್ಚು ಮಾತಾಡುತ್ತಾರೆಯೇ ಹೊರತು ತಮಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಾತಾಡಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗೇಲಿ ಮಾಡಿದರು. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಬಗ್ಗೆ ಯಾವತ್ತೂ ಮಾತಾಡಲ್ಲ, ಶಾಲಾ ಮಕ್ಕಳನ್ನು ಕರೆತಂದು ಸಾಲಲ್ಲಿ ನಿಲ್ಲಿಸಿ ಫೋಟೋ ತೆಗೆದು ಅವರನ್ನು ನರೇಗಾ ಯೋಜನೆಯ ಕೆಲಸಗಾರರು ಅಂತ ಹೇಳಿದ್ದಕ್ಕೆ ಬಿಜೆಪಿ ಶಾಸಕ ರಾಜೀವ್ ಕುಡಚಿ ಕೆಲ ಪ್ರಶ್ನೆಗಳನ್ನು ಕೇಳಿದ್ದರು, ಪ್ರಿಯಾಂಕ್ ಉತ್ತರ ಕೊಡಲೇ ಇಲ್ಲ ಎಂದು ಸಿಂಹ ಹೇಳಿದರು. ಮಲ್ಲಿಕಾರ್ಜುನ ಖರ್ಗೆ 8 ಸಲ ಶಾಸಕ, ಒಮ್ಮೆ ಎಂಪಿ ಮತ್ತೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ, ಅವರ ಮಗ ಮೂರು ಸಲ ಗೆದ್ದಿದ್ದಾರೆ, ಅದರೂ ಎಸ್ಎಸ್ಎಲ್ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಕಲಬುರಗಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿರುತ್ತದೆ ಎಂದು ಪ್ರತಾಪ್ ಹೇಳಿದರು.
ಇದನ್ನೂ ಓದಿ: ಸಿದ್ದು ಮಾತಿನ ಶೈಲಿಯಲ್ಲೇ ಪ್ರತಾಪ್ ಸಿಂಹ ಟಾಂಗ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

