ಸುದೀಪ್ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ; ಆಮೇಲೇನಾಗುತ್ತೆ ಗೊತ್ತಲ್ಲ
Bigg Boss Kannada Promoಕಿಚ್ಚ ಸುದೀಪ್ ಅವರು ಪ್ರತಿ ಬಾರಿ ಹಲವು ವಿಷಯಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಈ ಶನಿವಾರವೂ ಅದು ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ. ಜಾನ್ವಿ ಅವರಿಗೆ ವಿಶೇಷ ಕ್ಲಾಸ್ ಇರಲಿದೆ. ಅದಕ್ಕೆ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.
ಈ ಮೊದಲು ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದರು. ಈ ವಿಚಾರವನ್ನು ಸ್ವತಃ ಅಶ್ವಿನಿ ಗೌಡ ಅವರು ಹೇಳಿದ್ದರು. ಜಾನ್ವಿ ಹಾಗೂ ಅಶ್ವಿನಿ ಜಗಳ ಆಡಿಕೊಂಡಿದ್ದರು. ಇದು ನಾಟಕವಾಗಿತ್ತಂತೆ. ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಅಶ್ವಿನಿ ಹಾಗೂ ಜಾನ್ವಿ ಅವರು ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರಂತೆ. ಈ ವಿಷಯವನ್ನು ಅಶ್ವಿನಿ ಅವರು ಜಾನ್ವಿ ವಿರುದ್ಧ ಸಿಟ್ಟಾದಾಗ ಹೇಳಿದ್ದರು.
ಈ ವಿಷಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಜಾನ್ವಿ ಅವರು ವಿಷಯ ಬದಲಿಸಲು ಹೋದರು. ಇದನ್ನು ಸುದೀಪ್ ಅವರು ಮ್ಯಾನ್ಯುಪಲೇಷನ್ ಎಂದು ಕರೆದರು ಮತ್ತು ಕ್ಲಾಸ್ ತೆಗೆದುಕೊಂಡರು. ಆ ಎಪಿಸೋಡ್ ಇಂದು ರಾತ್ರಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
