ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಎಲ್ಲವನ್ನೂ ಬಯಲು ಮಾಡಿದ ಸುದೀಪ್

Updated on: Sep 20, 2026 | 3:00 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನ ಸೆ.20ರ ಸಂಚಿಕೆಯ ಪ್ರೋಮೋ ಇಲ್ಲಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಇದೆ. ಸ್ಪರ್ಧಿಗಳು ಏನೇ ಮಾಡಿದರೂ ಬಿಗ್ ಬಾಸ್​ಗೆ ತಿಳಿಯುತ್ತದೆ. ಹಾಗಿದ್ದರೂ ಕೂಡ ತಾವು ದೇವರ ವಿಗ್ರಹವನ್ನು ಹಿಡಿದು ಅಲ್ಲಾಡಿಸಿಲ್ಲ ಎಂದು ಕಿರಣ್ ಶಾಸ್ತ್ರಿ ವಾದ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನ ಸೆಪ್ಟೆಂಬರ್ 20ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಕಾಮನರ್ ಆಗಿ ದೊಡ್ಮನೆಗೆ ಕಾಲಿಟ್ಟಿರುವ ಕಿರಣ್ ಶಾಸ್ತ್ರಿ ಅವರು ದೇವರ ವಿಗ್ರಹದ ಎದುರು ನಿಂತು ಏನೆಲ್ಲ ಬೇಡಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಇದೆ. ಸ್ಪರ್ಧಿಗಳು ಏನೇ ಮಾಡಿದರೂ ಬಿಗ್ ಬಾಸ್​ಗೆ ತಿಳಿಯುತ್ತದೆ. ಹಾಗಿದ್ದರೂ ಕೂಡ ತಾವು ದೇವರ ವಿಗ್ರಹವನ್ನು ಹಿಡಿದು ಅಲ್ಲಾಡಿಸಿಲ್ಲ ಎಂದು ಕಿರಣ್ ಶಾಸ್ತ್ರಿ ಅವರು ವಾದ ಮಾಡಿದ್ದಾರೆ. ಆದರೆ ವಿಡಿಯೋ ಸಮೇತ ಅದನ್ನು ತೋರಿಸಿದಾಗ ಸೈಲೆಂಟ್ ಆಗಿದ್ದಾರೆ. ಈ ಬಗ್ಗೆ ಸೂಪರ್ ಸಂಡೇ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಚರ್ಚೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 20, 2026 02:31 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More