Vedha Movie: ‘ಸುದೀಪ್ ಕೂಡ ನಮ್ಮ ಫ್ಯಾಮಿಲಿ’: ‘ವೇದ’ ಆಡಿಯೋ ರಿಲೀಸ್ನಲ್ಲಿ ಕಿಚ್ಚನ ಬಗ್ಗೆ ಮಾತಾಡಿದ ಶಿವಣ್ಣ
Kichcha Sudeep | Shivarajkumar: ಚಿತ್ರದುರ್ಗದಲ್ಲಿ ನಡೆದ ‘ವೇದ’ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಕೂಡ ಆಗಮಿಸಿದ್ದರು. ಅವರ ಬಗ್ಗೆ ಶಿವಣ್ಣ ಮನಸಾರೆ ಮಾತನಾಡಿದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ನಟನೆಯ ‘ವೇದ’ ಸಿನಿಮಾ (Vedha Movie) ರಿಲೀಸ್ಗೆ ಸಿದ್ಧವಾಗಿದೆ. ಎ. ಹರ್ಷ ನಿರ್ದೇಶನ ಮಾಡಿರುವ ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಡಿ.15ರಂದು ನಡೆದಿದೆ. ಚಿತ್ರದುರ್ಗದಲ್ಲಿ ನಡೆದ ಈ ಅದ್ದೂರಿ ಇವೆಂಟ್ಗೆ ಕಿಚ್ಚ ಸುದೀಪ್ (Kichcha Sudeep) ಕೂಡ ಆಗಮಿಸಿದ್ದರು. ಅವರ ಬಗ್ಗೆ ಶಿವಣ್ಣ ಮನಸಾರೆ ಮಾತನಾಡಿದ್ದಾರೆ. ‘ಸುದೀಪ್ ಅವರು ನಮ್ಮ ಕುಟುಂಬದವರಿದ್ದಂತೆ. ಅವರನ್ನು ನಾನು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಅವರ ಹೋಟೆಲ್ಗೆ ನಮ್ಮ ಅಪ್ಪಾಜಿ-ಅಮ್ಮ ಹೋಗುತ್ತಿದ್ದರು’ ಎಂದು ಆ ದಿನಗಳನ್ನು ಶಿವಣ್ಣ (Shivarajkumar) ನೆನಪಿಸಿಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 16, 2022 09:47 AM