ರಾಯಚೂರು: ಏನಾಶ್ಚರ್ಯ! ಕುರ್ಕುರೆ ಸ್ನ್ಯಾಕ್ಸ್ ಪೊಟ್ಟಣಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು!!
ಈ ನೋಟುಗಳು ಅಸಲಿಯೋ, ಖೋಟಾ ನೋಟುಗಳೋ ಅಂತ ಇನ್ನಷ್ಟೇ ಪತ್ತೆಯಾಗಬೇಕು. ಮುದ್ಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಚೂರು: ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ರೆಡಿಮೇಡ್ ಅಥವಾ ಅಂಗಡಿಗಳಲ್ಲಿ ಸಿಗುವ ಸ್ನ್ಯಾಕ್ಸ್ ಗಳಲ್ಲಿ ಕುರ್ಕುರೆ ಒಂದು. ಈ ಸ್ನ್ಯಾಕ್ಸ್ ಪ್ಯಾಕೆಟ್ ಗಳಿಗೆ ಸಂಬಂಧಿಸಿದಂತೆ ರಾಯಚೂರು ಲಿಂಗಸೂಗೂರು ತಾಲ್ಲೂಕಿನ ಹುನೂರು ಗ್ರಾಮದಲ್ಲಿ ಒಂದು ವಿಚಿತ್ರ ಹಾಗೂ ಆಶ್ಚರ್ಯಕರ ಸಂಗತಿ ಜರುಗಿದೆ. ಇಲ್ಲಿ ಮಾರಾಟವಾದ 5 ರೂ. ಬೆಲೆಯ ಪ್ಯಾಕೆಟ್ ಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ದೊರಕಿವೆ! ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಊರಲ್ಲೆಲ್ಲ ಹಬ್ಬುತ್ತಿದ್ದಂತೆ ಜನ ಮುಗಿಬಿದ್ದು ಕುರ್ಕುರೆ ಪೊಟ್ಟಣಗಳನ್ನು ಖರೀದಿಸಿದ್ದಾರೆ. ಅಂಗಡಿಯಲ್ಲಿ ಸ್ಟಾಕ್ ಖಾಲಿಯಾಗಿದೆ, ಮಾಲೀಕ ಪುನಃ ಸ್ಟಾಕ್ ತರಿಸಿದಾಗ ಅವುಗಳಲ್ಲಿ ನೋಟು ಸಿಕ್ಕಿಲ್ಲ. ಈ ನೋಟುಗಳು ಅಸಲಿಯೋ, ಖೋಟಾ ನೋಟುಗಳೋ ಅಂತ ಇನ್ನಷ್ಟೇ ಪತ್ತೆಯಾಗಬೇಕು. ಮುದ್ಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

