ಗಿಲ್ಲಿಯಷ್ಟು ಅಮಾಯಕ ಯಾರೂ ಇಲ್ಲ: ಕಾವ್ಯ ವಿಚಾರಕ್ಕೆ ಕಾಲೆಳೆದ ಕಿಚ್ಚ ಸುದೀಪ್

Updated on: Oct 26, 2025 | 4:20 PM

ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸಖತ್ ಕಾಮಿಡಿ ಮಾಡುತ್ತಿದ್ದಾರೆ. ಅ.26ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ. ಜಂಟಿ ಟಾಸ್ಕ್ ಮುಗಿದ ನಂತರ ಸಹ ಕಾವ್ಯ ಶೈವ ಜೊತೆಯಲ್ಲಿ ಗಿಲ್ಲಿ ನಟ ಕ್ಲೋಸ್ ಆಗಿದ್ದಾರೆ. ಆ ವಿಷಯವನ್ನು ಇಟ್ಟುಕೊಂಡು ಕಿಚ್ಚ ಸುದೀಪ್ ತಮಾಷೆ ಮಾಡಿದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಸಖತ್ ಕಾಮಿಡಿ ಮಾಡುತ್ತಿದ್ದಾರೆ. ವಾರಾಂತ್ಯದ ಸಂಚಿಕೆಗಳಲ್ಲಿ ಕೂಡ ಅವರು ನಗುವಿನ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಆರಂಭದಲ್ಲಿ ಕಾವ್ಯ ಮತ್ತು ಗಿಲ್ಲಿ (Gilli Nata) ಜಂಟಿ ಆಗಿದ್ದರು. ಜಂಟಿ ಟಾಸ್ಕ್ ಮುಗಿದ ನಂತರ ಕೂಡ ಕಾವ್ಯ ಶೈವ (Kavya Shaiva) ಜೊತೆ ಗಿಲ್ಲಿ ಕ್ಲೋಸ್ ಆಗಿದ್ದಾರೆ. ಆ ವಿಷಯ ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ‘ಈ ಮನೆಯಲ್ಲಿ ನಿಮ್ಮಷ್ಟು ಅಮಾಯಕ ಬೇರೆ ಯಾರಾದ್ರೂ ಇದ್ದಾರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅಕ್ಟೋಬರ್ 26ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.