ಹೊಟ್ಟೆ ಉರಿದುಕೊಂಡು ಗಿಲ್ಲಿ ನಟನ ಗಡ್ಡ ಬೋಳಿಸಿದರಾ ಚಂದ್ರಪ್ರಭ?
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೀಸೆ ಬೋಳಿಸಬೇಕು ಎಂದು ಹೆಚ್ಚು ಆಸಕ್ತಿ ತೋರಿಸಿದ್ದೇ ಚಂದ್ರಪ್ರಭ. ಅವರು ಟ್ರಿಮ್ಮರ್ ಹಿಡಿದುಕೊಂಡು ಓಡೋಡಿ ಬಂದಿದ್ದಾರೆ. ಅಲ್ಲದೆ, ‘ಇಷ್ಟು ದಿನ ಈ ಮೀಸೆ ಇಟ್ಕೊಂಡು ಮೆರಿತಾ ಇದ್ದ. ಈಗ ಸರಿ ಆಯ್ತು’ ಎಂದು ಚಂದ್ರಪ್ರಭ ಅವರು ಹೇಳಿದ್ದಾರೆ. ಈ ಮಾತು ಚರ್ಚೆಗೆ ಕಾರಣ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಎಲ್ಲರ ಗಮನ ಸೆಳೆಯುತ್ತಿದೆ. ಈ ಶೋಗೆ ಗಿಲ್ಲಿ ನಟ ಹಾಗೂ ಚಂದ್ರಪ್ರಭ ಅವರು ಬಿಗ್ ಬಾಸ್ಮನೆಗೆ ಬಂದಿದ್ದಾರೆ. ಅವರು ಆಟ ಗಮನ ಸೆಳೆಯುತ್ತಿದೆ. ಇವರ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ ಎಂಬುದು ಗೊತ್ತೇ ಇದೆ. ಆದರೆ, ಗಿಲ್ಲಿ ನಟನ ಮೇಲೆ ಚಂದ್ರಪ್ರಭ ಅವರಿಗೆ ಹೊಟ್ಟೆ ಉರಿ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಕಾವ್ಯಾ ಶೈವ ಮಾತು ಕೇಳಿ ಗಡ್ಡ ಬೋಳಿಸಿಕೊಂಡರು. ಸುದೀಪ್ ಅವರು ‘ಕೆಂಪೇಗೌಡ’ ಸಿನಿಮಾದಲ್ಲಿ ಮೀಸೆ ಬಿಟ್ಟಿದ್ದರು. ಇದೇ ರೀತಿಯಲ್ಲಿ ಗಿಲ್ಲಿ ನಟನ ಮೀಸೆ ಶೇಪ್ ಕೂಡ ಮಾಡಲಾಯಿತು. ಆ ಮೀಸೆ ಬಂದಾಗಿನಿಂದಲೂ ಗಿಲ್ಲಿ ನಟನ ಗತ್ತು ಬೇರೆಯದೇ ಆಗಿತ್ತು. ಅವರು ಮೀಸೆ ಹಿಡಿದುಕೊಂಡು ಎಲ್ಲ ಕಡೆಗಳಲ್ಲೂ ಓಡಾಡುತ್ತಿದ್ದರು. ಇದಕ್ಕೆ ಚಂದ್ರಪ್ರಭ ಉರಿದುಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೀಸೆ ಬೋಳಿಸಬೇಕು ಎಂದು ಹೆಚ್ಚು ಆಸಕ್ತಿ ತೋರಿಸಿದ್ದೇ ಚಂದ್ರಪ್ರಭ. ಅವರು ಟ್ರಿಮ್ಮರ್ ಹಿಡಿದುಕೊಂಡು ಓಡೋಡಿ ಬಂದಿದ್ದಾರೆ. ಅಲ್ಲದೆ, ‘ಇಷ್ಟು ದಿನ ಈ ಮೀಸೆ ಇಟ್ಕೊಂಡು ಮೆರಿತಾ ಇದ್ದ. ಈಗ ಸರಿ ಆಯ್ತು’ ಎಂದು ಚಂದ್ರಪ್ರಭ ಅವರು ಹೇಳಿದ್ದಾರೆ. ಈ ಮಾತು ಚರ್ಚೆಗೆ ಕಾರಣ ಆಗಿದೆ. ಈ ಕೆಲಸದ ಹಿಂದೆ ಅಶ್ವಿನಿ ಗೌಡ ಅವರ ಆಜ್ಞೆ ಇತ್ತು ಎಂಬ ಮಾತು ಕೂಡ ಕೇಳಿ ಬಂದಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ದರ್ಶನ್ ನೆನಪಿಸಿದ ಗಿಲ್ಲಿ ಡೈಲಾಗ್; ಡಿ ಬಾಸ್ ಫ್ಯಾನ್ಸ್ಗೆ ಖುಷಿಯೋ ಖುಷಿ
ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಚಂದ್ರಪ್ರಭ ಅವರನ್ನು ತೆಗಳಿದ್ದಾರೆ. ‘ಗಿಲ್ಲಿಗೆ ಜನಪ್ರಿಯತೆ ಸಿಗುತ್ತದೆ ಎಂಬ ಕಾರಣಕ್ಕೆ ಚಂದ್ರಪ್ರಭ ಅವರು ಈ ರೀತಿ ಮಾಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಗಿಲ್ಲಿ ಒಳ್ಳೆತನವನ್ನು ಪ್ರಶಂಸಿದ್ದಾರೆ. ‘ಗಿಲ್ಲಿ ನಟ ಆಗಿದ್ದರಿಂದ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಉಳಿದ ಯಾರೇ ಆಗಿದ್ದರೂ ಇಷ್ಟು ಸಾಫ್ಟ್ ಆಗಿ ಪ್ರತಿಕ್ರಿಯೆ ಮಾಡುತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಇಬ್ಬರ ಗೆಳೆತನ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



