ಮಧ್ಯರಾತ್ರಿ ಹೇಗಿತ್ತು ನೋಡಿ ಕಿಚ್ಚ ಸುದೀಪ್ ಬರ್ತ್ಡೇ ಸೆಲೆಬ್ರೇಷನ್
ಕಿಚ್ಚ ಸುದೀಪ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 28 ವರ್ಷಗಳು ತುಂಬಿವೆ ಅನ್ನೋದು ಸಾಧನೆಯೇ ಸರಿ. ಸುದೀಪ್ಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅವರು ಫ್ಯಾನ್ಸ್ ಭೇಟಿ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
‘ಬರ್ತ್ಡೇ ದಿನ (ಸೆಪ್ಟೆಂಬರ್ 2) ಮಧ್ಯರಾತ್ರಿ ಯಾರೂ ಮನೆಯ ಬಳಿ ಬರಬೇಡಿ’ ಎಂದು ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕೇಳಿಕೊಂಡಿದ್ದರು. ಆದರೆ, ಫ್ಯಾನ್ಸ್ ಇವರ ಮಾತನ್ನು ಕೇಳಿಲ್ಲ. ಬೆಂಗಳೂರಿನ ಜೆಪಿ ನಗರದಲ್ಲಿ ಇರುವ ಸುದೀಪ್ ಮನೆ ಸಮೀಪ ಫ್ಯಾನ್ಸ್ ನೆರೆದಿದ್ದಾರೆ. ಸುದೀಪ್ ಅವರು ಅನಿವಾರ್ಯವಾಗಿ ಮನೆಯ ಹೊರಗೆ ಬಂದಿದ್ದಾರೆ. ಅಭಿಮಾನಿಗಳತ್ತ ಅವರು ಕೈ ಬೀಸಿದ್ದಾರೆ. ಇದು ಅವರ ಬರ್ತ್ಡೇ ಪ್ರಯುಕ್ತ ಸಿನಿಮಾ ತಂಡದ ಕಡೆಯಿಂದ ವಿವಿಧ ಗಿಫ್ಟ್ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:15 am, Mon, 2 September 24