ಮಧ್ಯರಾತ್ರಿ ಹೇಗಿತ್ತು ನೋಡಿ ಕಿಚ್ಚ ಸುದೀಪ್ ಬರ್ತ್​ಡೇ ಸೆಲೆಬ್ರೇಷನ್

Updated on: Sep 02, 2024 | 8:15 AM

ಕಿಚ್ಚ ಸುದೀಪ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 28 ವರ್ಷಗಳು ತುಂಬಿವೆ ಅನ್ನೋದು ಸಾಧನೆಯೇ ಸರಿ. ಸುದೀಪ್​ಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅವರು ಫ್ಯಾನ್ಸ್ ಭೇಟಿ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

‘ಬರ್ತ್​ಡೇ ದಿನ (ಸೆಪ್ಟೆಂಬರ್ 2) ಮಧ್ಯರಾತ್ರಿ ಯಾರೂ ಮನೆಯ ಬಳಿ ಬರಬೇಡಿ’ ಎಂದು ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕೇಳಿಕೊಂಡಿದ್ದರು. ಆದರೆ, ಫ್ಯಾನ್ಸ್ ಇವರ ಮಾತನ್ನು ಕೇಳಿಲ್ಲ. ಬೆಂಗಳೂರಿನ ಜೆಪಿ ನಗರದಲ್ಲಿ ಇರುವ ಸುದೀಪ್ ಮನೆ ಸಮೀಪ ಫ್ಯಾನ್ಸ್ ನೆರೆದಿದ್ದಾರೆ. ಸುದೀಪ್ ಅವರು ಅನಿವಾರ್ಯವಾಗಿ ಮನೆಯ ಹೊರಗೆ ಬಂದಿದ್ದಾರೆ. ಅಭಿಮಾನಿಗಳತ್ತ ಅವರು ಕೈ ಬೀಸಿದ್ದಾರೆ. ಇದು ಅವರ ಬರ್ತ್​ಡೇ ಪ್ರಯುಕ್ತ ಸಿನಿಮಾ ತಂಡದ ಕಡೆಯಿಂದ ವಿವಿಧ ಗಿಫ್ಟ್ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 02, 2024 08:15 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More