ಗಿಲ್ಲಿ ನಟನಿಗೆ ಬರುತ್ತಾ ಈ ಪರಿಸ್ಥಿತಿ? ಕಾವ್ಯ ಎದುರಲ್ಲೇ ಸೂಚನೆ ಕೊಟ್ಟ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಈಗಾಗಲೇ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಆ ವಿಷಯದ ಬಗ್ಗೆ ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ಗಿಲ್ಲಿ ನಟನ ಹಲವು ಬಗೆಯ ಗೆಟಪ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದೇ ರೀತಿ ಮಾಡೋಣವೇ ಎಂದು ಸುದೀಪ್ ಅವರು ಕೇಳಿದ್ದಾರೆ.
ಸದ್ಯಕ್ಕಂತೂ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಹೈಲೈಟ್ ಆಗುತ್ತಿದ್ದಾರೆ. ಭಾನುವಾರದ (ಅ.26) ಸಂಚಿಕೆಯಲ್ಲಿ ಅವರ ಬಗ್ಗೆಯೇ ಹೆಚ್ಚು ಚರ್ಚೆ ಆಗಲಿದೆ. ಕಿಚ್ಚ ಸುದೀಪ್ ಅವರು ಕೆಲವು ಮೀಮ್ಗಳನ್ನು ತೋರಿಸಿದ್ದಾರೆ. ಅದರಲ್ಲಿ ಗಿಲ್ಲಿ ನಟನ ಹಲವು ಬಗೆಯ ಗೆಟಪ್ಗಳು ಇವೆ. ಒಂದಷ್ಟು ಫೋಟೋ ತೋರಿಸಿ, ‘ನೀವು ಓಕೆ ಎಂದರೆ ಈ ಗೆಟಪ್ ಕೂಡ ಮಾಡಿಸೋಣ’ ಎಂದು ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ. ಫೋಟೋಗಳನ್ನು ನೋಡಿ ಕಾವ್ಯ ಶೈವ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಗಿಲ್ಲಿಗೆ ಇಂಥ ಗೆಟಪ್ ಓಕೆ ಎಂದು ಕಾವ್ಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

