ಫ್ರೆಂಡ್ಶಿಪ್ಗಾಗಿ ಫ್ರೆಂಡ್ಶಿಪ್ ಸಾಂಗ್ ಹೇಳಿದ ಸುದೀಪ್; ಮೆಲೋಡಿ ಹಾಡಿಗೆ ಕಿಚ್ಚನ ಧ್ವನಿ
ಕಿಚ್ಚ ಸುದೀಪ್ ಅವರು ಸಾಕಷ್ಟು ಹಾಡುಗಳನ್ನು ಈ ಮೊದಲು ಹಾಡಿದ್ದು ಇದೆ. ಈಗ ಅವರು ಮೆಲೋಡಿ ಹಾಡನ್ನು ಹಾಡಿದ್ದಾರೆ. ಈ ಸುದ್ದಿ ಸಾಕಷ್ಟು ಗಮನ ಸೆಳೆಯುತ್ತಿದೆ. ಅವರಿಗೆ ಮೆಲೋಡಿ ಹಾಡು ಹಾಡಲು ಸಾಕಷ್ಟು ಭಯ ಇತ್ತು. ಆದರೆ, ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸುದೀಪ್ ಅವರು ಫ್ರೆಂಡ್ಶಿಪ್ಗಾಗಿ ಏನು ಬೇಕಾದರೂ ಮಾಡಲು ರೆಡಿ. ಈಗ ಚಂದನ್ ಕುಮಾರ್ ಅವರ ಜೊತೆಗಿನ ಗೆಳೆತನದ ಕಾರಣಕ್ಕೆ ಹಾಡನ್ನು ಹಾಡಿದ್ದಾರೆ. ಅದು ಕೂಡ ಮೆಲೋಡಿ ಸಾಂಗ್ ಅನ್ನೋದು ವಿಶೇಷ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ‘ಫ್ಲರ್ಟ್’ ಹೆಸರಿನ ಚಿತ್ರವನ್ನು ಚಂದನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ‘ನೀ ನನ್ನ ಜೀವ..’ ಹೆಸರಿನ ಫ್ರೆಂಡ್ಶಿಪ್ ಆ್ಯಂಥಮ್ ಸಾಂಗ್ನ ಸುದೀಪ್ (Kichcha Sudeep) ಹಾಡಿದ್ದಾರೆ. ಇದರ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಾಡು ರಿಲೀಸ್ ಆಗಿ ಸಾವಿರಾರು ವೀವ್ಸ್ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

