Kichcha Sudeep: ಪಿವಿಆರ್​ ಹೊಸ ಮಲ್ಟಿಪ್ಲೆಕ್ಸ್​ ಆವರಣದಲ್ಲಿ ಕನ್ನಡ ನಟರ ಫೋಟೋ ಇಲ್ಲ; ಸುದೀಪ್​ ಪ್ರತಿಕ್ರಿಯೆ ಏನು?

| Updated By: ಮದನ್​ ಕುಮಾರ್​

Updated on: Dec 02, 2022 | 3:28 PM

PVR Multiplex: ‘ಇಂಥ ಮಲ್ಟಿಪ್ಲೆಕ್ಸ್​ ಶುರುವಾಗಿರುವುದಕ್ಕೆ ಖುಷಿ ಪಡೋಣ. ಯಾವಾಗಲೂ ತಪ್ಪನ್ನೇ ಹುಡುಕಬಾರದು’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಬೆಂಗಳೂರಿನ ರೆಕ್ಸ್​ ಚಿತ್ರಮಂದಿರ ಇದ್ದ ಜಾಗದಲ್ಲೀಗ ಹೊಸ ಪಿವಿಆರ್​ ಮಲ್ಟಿಪ್ಲೆಕ್ಸ್​ (PVR Multiplex) ತಲೆ ಎತ್ತಿದೆ. ಇದರ ಆವರಣದಲ್ಲಿ ಹಾಲಿವುಡ್​, ಬಾಲಿವುಡ್​ನ ದಿಗ್ಗಜರ ಫೋಟೋಗಳನ್ನು ಹಾಕಲಾಗಿದೆ. ಕನ್ನಡದ (Sandalwood) ಸೆಲೆಬ್ರಿಟಿಗಳ ಫೋಟೋ ಇಲ್ಲ. ಈ ಬಗ್ಗೆ ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಗಳೂರಿನಲ್ಲಿ ಇಂಥ ಮಲ್ಟಿಪ್ಲೆಕ್ಸ್​ ಶುರುವಾಗಿರುವುದಕ್ಕೆ ಖುಷಿಪಡೋಣ. ಯಾವಾಗಲೂ ತಪ್ಪನ್ನೇ ಹುಡುಕಬಾರದು. ಕನ್ನಡ ಸಿನಿಮಾ ರಿಲೀಸ್​ ಆಗಲಿ ಅಂತ ಮಲ್ಟಿಪ್ಲೆಕ್ಸ್​ ಮಾಡಿದ್ದಾರೆ. ಆತುರ ಬೇಡ. ಮುಂದಿನ ದಿನಗಳಲ್ಲಿ ಕನ್ನಡದವರ ಫೋಟೋ ಹಾಕ್ತಾರೆ ಬಿಡಿ’ ಎಂದು ಸುದೀಪ್​ (Kichcha Sudeep) ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 02, 2022 03:28 PM