‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಎಚ್ಚರಿಕೆ ಕೊಟ್ಟ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕ್ಯಾಪ್ಟನ್ ಆಗಿದ್ದ ಹಂಸ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಅವರಿಂದ ನಿಯಮಗಳ ಬ್ರೇಕ್ ಕೂಡ ಆಗಿತ್ತು. ಈಗ ಅವರಿಗೆಲ್ಲ ಸುದೀಪ್ ಖಡಕ್ ಎಚ್ಚರಿಕೆ ನೋಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರದಲ್ಲಿ ಅನೇಕರು ಉದ್ದೇಶ ಪೂರ್ವಕವಾಗಿ ನಿಯಮ ಮೀರಿದ್ದರು. ಕೆಲವರು ಮಿತಿಮೀರಿ ನಡೆದುಕೊಂಡಿದ್ದರು. ಹೀಗಾಗಿ, ವೀಕೆಂಡ್ನಲ್ಲಿ ಸುದೀಪ್ ಕಡೆಯಿಂದ ಕ್ಲಾಸ್ ಪಕ್ಕಾ ಎಂದು ಅನೇಕರು ಊಹಿಸಿದ್ದರು. ಅದು ನಿಜವಾಗಿದೆ. ಹೊಸ ಪ್ರೋಮೋದಲ್ಲಿ ಸುದೀಪ್ ಎಚ್ಚರಿಕೆ ಒಂದನ್ನು ನೀಡಿದ್ದಾರೆ. ‘ನಿಯಮಗಳಿಗೆ ನಿಯತ್ತಾಗಿ ಇದ್ದವರು ಯಾರು? ಮಿತಿ ಮೀರಿ ನಿಯಮಗಳನ್ನು ಮುರಿದವರು ಯಾರು? ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’ ಎಂದು ಸುದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 12, 2024 02:26 PM
Latest Videos