ಮಂಗಳೂರು: ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನಟ ದರ್ಶನ್ ಹಾಗೂ ಗ್ಯಾಂಗ್ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಈಗ ನವರಾತ್ರಿ ವೇಷದ ಥೀಮ್! ರೇಣುಕಾಸ್ವಾಮಿಯ ಪ್ರೇತಾತ್ಮ ಎಂಬಂತೆ ಬಿಂಬಿತವಾದ ನವರಾತ್ರಿ ವೇಷವೊಂದು ಕರಾವಳಿ ಕರ್ನಾಟಕದ ಮಂಗಳೂರು ಸುತ್ತಮುತ್ತ ಮನೆ ಮನೆ ಸಂಚರಿಸಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಮಂಗಳೂರು, ಅಕ್ಟೋಬರ್ 12: ನವರಾತ್ರಿ ವೇಷದ ರೂಪದಲ್ಲಿ ರೇಣುಕಾಸ್ವಾಮಿ ಪ್ರೇತಾತ್ಮ ಬಂದಿರುವುದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಮನ ಜೊತೆ ಭೂಲೋಕಕ್ಕೆ ಬಂದ ಪ್ರೇತಾತ್ಮ, ಭೂಲೋಕದಲ್ಲಿ ತನಗೆ ಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಂತೆ ಚಿತ್ರಣ ಮಾಡಲಾಗಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ನವರಾತ್ರಿ ಸಂದರ್ಭ ವಿವಿಧ ವೇಷ ಹಾಕಿ ವೇಷಧಾರಿಗಳು ಮನೋರಂಜನೆ ನೀಡುತ್ತಾರೆ. ಈ ಬಾರಿ ವ್ಯಕ್ತಿಗಳಿಬ್ಬರು ರೇಣುಕಾಸ್ವಾಮಿ ಪ್ರೇತಾತ್ಮ ಹಾಗೂ ಯಮನ ವೇಷ ಧಾರಣೆ ಮಾಡಿ ಬಂದಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿರುವ ಧ್ವನಿ ತುಳು ಭಾಷೆಯಲ್ಲಿದೆ. ಚಿತ್ರಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಿದ್ದೇವೆ ಎಂಬ ಅರ್ಥ ಬರುವಂತೆ ತುಳು ಭಾಷೆಯಲ್ಲಿ ವೇಷಧಾರಿಗಳು ಮಾತನಾಡಿಕೊಂಡಿದ್ದಾರೆ. ಹೊಸ ಪರಿಕಲ್ಪನೆಯ ನವರಾತ್ರಿ ವೇಷದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

