‘ರಾನಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದ್ದೇಕೆ? ವಿವರಿಸಿದ ಕಿರಣ್ ರಾಜ್
ಕಿರಣ್ ರಾಜ್ ಅವರು ‘ರಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಆಗಸ್ಟ್ 30ರಂದು ರಿಲೀಸ್ ಆಗ್ಬೇಕಿದ್ದ ರಾನಿ ಸಿನಿಮಾ ಇದೀಗ ಸೆಪ್ಟೆಂಬರ್ 12 ಕ್ಕೆ ತೆರೆಗೆ ಬರಲಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಕಿರಣ್ ರಾಜ್ ಅವರು ಕಿರುತೆರೆಯಲ್ಲಿ ನಟಿಸಿ ಫೇಮಸ್ ಆದವರು. ಈಗ ಅವರು ಹಿರಿತೆರೆಯಲ್ಲಿ ಫೇಮಸ್ ಆಗಿದ್ದಾರೆ. ‘ರಾನಿ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 30ರಂದು ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ದಿನಾಂಕ ಈಗ ಸೆಪ್ಟೆಂಬರ್ 12ಕ್ಕೆ ಮುಂದೂಡಲ್ಪಟ್ಟಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಭೀಮ ಹಾಗು ಕೃಷ್ಣಂ ಪ್ರಣಯ ಸಖಿ ಚೆನ್ನಾಗಿ ರನ್ ಆಗ್ತಿದೆ. ಹೀಗಾಗಿ ನಮ್ಮ ಸಿನಿಮಾ ಮುಂದಕ್ಕೆ ಹೋಗಿದೆ. ಆ ಎರಡು ವಾರವನ್ನು ನಾವು ಪ್ರಮೋಷನ್ಗೆ ಬಳಕೆ ಮಾಡಿಕೊಳ್ಳುತ್ತೇವೆ’ ಎಂದು ಕಿರಣ್ ರಾಜ್ ಅವರು ಹೇಳಿದ್ದಾರೆ. ‘ರಾನಿ’ ಸಿನಿಮಾದಲ್ಲಿ ಕಿರಣ್ ರಾಜ್ ಅವರು ಆ್ಯಕ್ಷನ್ ಮೆರೆದಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.