ಆಹಾ! ಸವಿಯಲು ರುಚಿ ರುಚಿಯಾಗಿರುವ ಮೊಸರು ಬೂಂದಿ ತಯಾರಿಸುವುದು ಹೇಗೆ ಗೊತ್ತಾ?
ಹೊರಗಡೆಯ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿದ ರೆಸಿಪಿಗಳನ್ನು
ಮೊಸರು ಬೂಂದಿ ಹೆಸರು ಕೇಳಿದಾಕ್ಷಣ ಸ್ವೀಟ್ ಆಗಿರುತ್ತೆ ಅಂದುಕೊಂಡ್ರಾ? ಇಲ್ಲ, ಈ ಮೊಸರು ಬೂಂದಿ ಖಾರಾ ಮೊಸರು ಬೂಂದಿ. ಬಹಳ ಸುಲಭದಲ್ಲಿ ರೆಸಿಪಿ ತಯಾರಿಸಬಹುದು. ಮನೆಯಲ್ಲಿ ದಿಢೀರ್ ಸ್ನ್ಯಾಕ್ ತಯಾರಿಸಬೇಕು ಅಂದಾದಾಗ ಈ ತಿಂಡಿ ತಯಾರಿಸಿ. ಸವಿಯಲು ತುಂಬಾ ರುಚಿಯಾಗಿರುತ್ತೆ. ಹೊರಗಡೆಯ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿದ ರೆಸಿಪಿಗಳನ್ನು ತಯಾರಿಸಿ ರುಚಿ ಸವಿಯುವುದರಲ್ಲಿ ಏನೋ ಒಂದು ರೀತಿಯ ಖುಷಿ ಇದೆ ಅಲ್ವೇ?
ಕೊತ್ತಂಬರಿ ಸೊಪ್ಪು, ಈರುಳ್ಳಿ, ಕ್ಯಾರೆಟ್, ಟೊಮೇಟೊ, ಖಾರಾ ಬೂಂದಿ, ಸಕ್ಕರೆ ಪುಡಿ, ದನಿಯಾ ಪುಡಿ, ಮೊಸರು, ಮೆಣಸಿನ ಪುಡಿ, ಗರಂ ಮಸಾಲಾ, ಉಪ್ಪು ಇಷ್ಟೇ ಸಾಕು ಮೊಸರು ಬೂಂದಿ ತಯಾರಿಸಲು ಬೇಕಾದ ಸಾಮಗ್ರಿಗಳು. ಒಮ್ಮೆ ಮನೆಯಲ್ಲಿ ತಯಾರಿಸಿ ನೋಡಿ .. ಮತ್ತೆ ಮತ್ತೆ ತಯಾರಿಸಿ ರುಚಿ ಸವಿಯೋಣ ಅನ್ನಿಸುತ್ತೆ!
ಇದನ್ನೂ ಓದಿ:
ಸ್ಪೆಷೆಲ್ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್ ತಿಂಡಿ ತಯಾರಿಸಲು