ಆರ್​ಸಿಬಿ-ಸಿಎಸ್​ಕೆ ಮ್ಯಾಚ್ ನೋಡಲು ಬರ್ತಿದ್ದೀರಾ? ಹಾಗಾದರೆ ವಾಹನಗಳನ್ನು ಈ ಜಾಗಗಳಲ್ಲಿ ಪಾರ್ಕ್ ಮಾಡಿ

|

Updated on: May 18, 2024 | 11:57 AM

ಇವತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆಯವರೆಗೆ, ಕ್ವೀನ್ಸ್ ರಸ್ತೆ, ರಾಜ್ ಭವನ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ರೋಡ್, ಕಸ್ತೂರ್ ಬಾ ರಸ್ತೆ, ಎಂಜಿ ರೋಡ್, ಸೆಂಟ್ರಲ್ ಸ್ಟ್ರೀಟ್, ನೃಪತುಂಗ ರಸ್ತೆ ಮೊದಲಾದ ರಸ್ತೆಗಳಲ್ಲಿ ನೀವು ಕಾರಾಗಲೀ, ದ್ವಿಚಕ್ರ ವಾಹನವಾಗಲೀ ಪಾರ್ಕ್ ಮಾಡುವಂತಿಲ್ಲ. ಪಾರ್ಕಿಂಗ್ ಗಾಗಿ ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ಯುಬಿ ಸಿಟಿ ಪಾರ್ಕಿಂಗ್ ಏರಿಯಾ, ಶಿವಾಜಿ ನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು: ಇಂಡಿಯನ್ ಪ್ರಿಮೀಯರ್ ಲೀಗ್-2024 (Indian premier League-2024) ಕೊನೆಯ ಹಂತಕ್ಕೆ ಬಂದಿದೆ. ಇವತ್ತು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಬದ್ಧ ಎದುರಾಳಿಗಳಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಚೆನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ತನ್ನ ಕೊನೆಯ 5 ಪಂದ್ಯಗಳನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಫಫ್ ಡು ಪ್ಲೆಸ್ಸೀ ತಂಡ ಪ್ಲೇ ಆಫ್ ಹಂತ ತಲುಪಬೇಕಾದರೆ ಇಂದು ದೊಡ್ಡ ಜಯ ಸಾಧಿಸಬೇಕು. ಪಂದ್ಯ ಗೆದ್ದರೂ ಸಿಎಸ್ ಕೆ ತಂಡದ ಕ್ಯೂಅರ್ ಆರ್ ಉತ್ತಮವಾಗಿರುವುದರಿಂದ ಮುಂದೆ ಸಾಗಲು ಬೆಂಗಳೂರು ತಂಡಕ್ಕೆ ಅಡಚಣೆಯಾಗಬಹುದು. ಓಕೆ ಅದನ್ನು ಆಮೇಲೆ ಯೋಚನೆ ಮಾಡೋಣ. ಇವತ್ತಿನ ಪಂದ್ಯ ನೋಡಲು ಟಿಕೆಟ್ ಖರೀದಿಸಿರುವುರಾದರೆ ವಾಹನಗಳನ್ನು ಎಲ್ಲೆಲ್ಲಿ ಪಾರ್ಕ್ ಮಾಡಬಹುದು ಅನ್ನೋದನ್ನು ಕೊಂಚ ಗಮನದಲ್ಲಿಟ್ಟುಕೊಳ್ಳಿ. ಇವತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆಯವರೆಗೆ, ಕ್ವೀನ್ಸ್ ರಸ್ತೆ, ರಾಜ್ ಭವನ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ರೋಡ್, ಕಸ್ತೂರ್ ಬಾ ರಸ್ತೆ, ಎಂಜಿ ರೋಡ್, ಸೆಂಟ್ರಲ್ ಸ್ಟ್ರೀಟ್, ನೃಪತುಂಗ ರಸ್ತೆ ಮೊದಲಾದ ರಸ್ತೆಗಳಲ್ಲಿ ನೀವು ಕಾರಾಗಲೀ, ದ್ವಿಚಕ್ರ ವಾಹನವಾಗಲೀ ಪಾರ್ಕ್ ಮಾಡುವಂತಿಲ್ಲ. ಪಾರ್ಕಿಂಗ್ ಗಾಗಿ ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ಯುಬಿ ಸಿಟಿ ಪಾರ್ಕಿಂಗ್ ಏರಿಯಾ, ಶಿವಾಜಿ ನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  RCB vs CSK: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ದಿಢೀರ್ ಎಂಟ್ರಿ ಕೊಟ್ಟ ಎಂಎಸ್ ಧೋನಿ: ವಿಡಿಯೋ