ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಕರೆಯಲ್ಪಡುವ ಬೀದರ್​ ಜಿಲ್ಲೆಯ ಗೋರ್ಟಾ ಗ್ರಾಮದ ಇತಿಹಾಸ ತಿಳಿಯಿರಿ

ಕಿರಣ್ ಹನುಮಂತ್​ ಮಾದಾರ್

Updated on: Mar 26, 2023 | 11:20 AM

ಗೊರಟಾ(ಬಿ) ಗ್ರಾಮದಲ್ಲಿ ನಿರ್ಮಾಣವಾದ ಹುತಾತ್ಮರ ಸ್ಮಾರಕವನ್ನ ಇನ್ನು ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಲಿದ್ದಾರೆ. ಅಮಿತ್ ಶಾ ಆಗಮನ ಹಿನ್ನೆಲೆ ಗೊರಟಾ ಗ್ರಾಮ ಫುಲ್​ ಕೇಸರಿಮಯವಾಗಿದೆ.

ಬೀದರ್​: ಗೊರಟಾ(ಬಿ) ಗ್ರಾಮದಲ್ಲಿ ನಿರ್ಮಾಣವಾದ ಹುತಾತ್ಮರ ಸ್ಮಾರಕವನ್ನ ಇನ್ನು ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಲಿದ್ದಾರೆ. ಹೌದು ಕನ್ನಡಿಗರ ನೆತ್ತರು ಹರಿದ ಜಾಗ ಜಿಲ್ಲೆಯ ಗೊರಟಾ ಗ್ರಾಮಕ್ಕೆ ಇಂದು ಬರುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಜಲಿಯನ್ ವಾಲಾಬಾಗ್​ ಜನರ ಗಮನ ಸೆಳೆಯಲಿದೆ. ಇನ್ನು ಅಮಿತ್ ಶಾ ಆಗಮನ ಹಿನ್ನೆಲೆ ಗೊರಟಾ ಗ್ರಾಮ ಫುಲ್​ ಕೇಸರಿಮಯವಾಗಿದೆ.

ಇತಿಹಾಸ ಹೀಗಿದೆ

1948 ರ ಮೇ 9, 10 ರಂದು ನಡೆದಿದ್ದ ಹತ್ಯಾಕಾಂಡದಲ್ಲಿ ಗೊರಟಾ ಗ್ರಾಮದ ಇನ್ನೂರಕ್ಕೂ ಹೆಚ್ಚು ಜನರ ಕಗ್ಗೋಲೆಯಾಗಿತ್ತು. ಇದು ಹೈದ್ರಾಬಾದ್ ನಿಜಾಮನ ಖಾಸಗಿ ಸೈನ್ಯ ರಜಾಕ್ ರಿಂದ ನಡೆದಿದ್ದ ಹತ್ಯೆಯಾಗಿದೆ.
ಈ ಗ್ರಾಮದ ಲಕ್ಷ್ಮಿದೇವರ ದೇವಸ್ಥಾನದ ಮುಂದೆಯೇ 50 ಕ್ಕೂ ಹೆಚ್ಚು ಜನರ ಕೊಲೆ ಮಾಡಲಾಗಿದ್ದು,
ಇಂದು ಇದೇ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೂಜೆ ಸಲ್ಲಿಸಲಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us