ಮನುಷ್ಯನಿಗೆ ಜ್ಞಾನದ ಅವಶ್ಯಕತೆ ಬಹಳ ಮುಖ್ಯ; ಸಿದ್ಧೇಶ್ವರ ಸ್ವಾಮೀಜಿ

ಮನುಷ್ಯನಿಗೆ ಜ್ಞಾನದ ಅವಶ್ಯಕತೆ ಬಹಳ ಮುಖ್ಯ; ಸಿದ್ಧೇಶ್ವರ ಸ್ವಾಮೀಜಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2022 | 7:42 AM

ಮನುಷ್ಯನಲ್ಲಿ ಎರಡು ಬೆಳಕಿವೆ. ಒಂದು ಆತನಲ್ಲಿರುವ ಜ್ಞಾನದ ಬೆಳಕಾದ್ರೇ ಇನ್ನೊಂದು ಆತ ಕಣ್ಣಿನಿಂದ ನೋಡುವ ಹೊರ ಬೆಳಕು. ಹಾಗೆ ಮನುಷ್ಯ ಜ್ಞಾನದ ಬೆಳಕನ್ನ ಸಂಪಾದಿಸಬೇಕು. 

ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ (Siddeshwara Swamiji)ಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ದೀಪಗಳಲ್ಲಿ ಕೆಲ ದೀಪಗಳು ಬೇಗ ಆರಿ ಹೊದರೇ ಇನ್ನೂ ಕೆಲವು ದೀಪಗಳು ಬಹಳ ಹೊತ್ತು ಉರಿಯುತ್ತವೆ. ಹಾಗೇಯೇ ಈ ಬೆಳಕಿನಲ್ಲಿ ದೇವರನ್ನ ಕಾಣಬೇಕು. ಬೆಳಕೇ ದೇವರು. ಪ್ರತಿದಿನ ಮನೆಳಲ್ಲಿ ಸಾಯಂಕಾಲ ದೀಪ ಹಚ್ಚಿ ನಮಸ್ಕರಿಸುತ್ತಾರೆ. ದೊಡ್ದ ದೊಡ್ಡ ಮನೆಯಿದ್ದರೇ ಏನೂ ಪ್ರಯೊಜನ, ಬೆಳಕು ಇರಬೇಕು. ಈ ಬೆಳಕನ್ನ ದೇವರು ಎಂದು ಭಾವಿಸಿದವರು ಭಾರತೀಯರು. ಅಂತಹ ಬೆಳಕನ್ನ ಪ್ರತಿಯೊಬ್ಬರು ಅನುಭವಿಸಬೇಕು. ಮನುಷ್ಯನಲ್ಲಿ ಎರಡು ಬೆಳಕಿವೆ. ಒಂದು ಆತನಲ್ಲಿರುವ ಜ್ಞಾನದ ಬೆಳಕಾದ್ರೇ ಇನ್ನೊಂದು ಆತ ಕಣ್ಣಿನಿಂದ ನೋಡುವ ಹೊರ ಬೆಳಕು. ಹಾಗೆ ಮನುಷ್ಯ ಜ್ಞಾನದ ಬೆಳಕನ್ನ ಸಂಪಾದಿಸಬೇಕು.

ಇದನ್ನೂ ಓದಿ:

ಮನೆ ಖರೀದಿಸುವ ಯೋಜನೆ ಇದೆಯೇ, ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ

Health Tips: ಹೃದಯವನ್ನು ಸದಾ ಆರೋಗ್ಯವಾಗಿಡಲು ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಸೇವಿಸಿ