ಅಯೋಧ್ಯೆ ರಾಮಮಂದಿರಕ್ಕೆ ತಲಕಾವೇರಿ ನೀರು ರವಾನೆ
ರಾಮಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರು ರವಾನೆಯಾಗುತ್ತಿದೆ. ಅದರಂತೆ ದಕ್ಷಿಣ ಮಂದಾಕಿನಿ ಕಾವೇರಿ ನದಿಯಿಂದಲೂ ತೀರ್ಥ ರವಾನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್ ಸದಸ್ಯರು ತೀರ್ಥ ಸಂಗ್ರಹಿಸಿದರು.
ಮಡಿಕೇರಿ, ಜನವರಿ 07: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ಉದ್ಘಾಟನೆಯಾಗಲಿದೆ. ಅಂದೇ ರಾಮಲಲ್ಲಾ (ಬಾಲ ರಾಮನ) ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ರಾಮಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರು ರವಾನೆಯಾಗುತ್ತಿದೆ. ಅದರಂತೆ ದಕ್ಷಿಣ ಮಂದಾಕಿನಿ ಕಾವೇರಿ (Cauvery) ನದಿಯಿಂದಲೂ ತೀರ್ಥ ರವಾನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್ ಸದಸ್ಯರು ತೀರ್ಥ ಸಂಗ್ರಹಿಸಿದರು. ಈ ವೇಳೆ ಕಾವೇರಿ ಮಾತೆ ನಾಮ ಜಪ ಮಾಡಲಾಯಿತು ಮತ್ತು ವಿಶೇಷ ಪೂಜೆ ನಡೆಸಿದವು.