ಕುಮಾರಸ್ವಾಮಿ ಬಿಡದಿ ಮನೆಗೆ ತೆರಳಿ ಶುಭಕೋರಿ ಆಶೀರ್ವಾದ ಪಡೆದ ಸಂಸದ ಪ್ರತಾಪ್ ಸಿಂಹ

|

Updated on: Jan 12, 2024 | 12:39 PM

ಆಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರನ್ನು ಪ್ರತಾಪ್ ಸಿಂಹ ಪದೇಪದೆ ತಮ್ಮ ಟ್ವೀಟ್ ಗಳಲ್ಲಿ ಟೀಕಿಸುತ್ತಿದ್ದರು. ಅವರ ಟ್ವೀಟ್ ಗಳಿಗೆ ಕುಮಾರಸ್ವಾಮಿ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ವೆಲ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮಾಡಿಕೊಂಡಿರುವುದರಿಂದ ಹಿಂದಿನ ವಿಷಯಗಳನ್ನು ಅವರು ಮರೆತಿದ್ದಾರೆ.

ರಾಮನಗರ: ರಾಜ್ಯದಲ್ಲಿ ರಾಜಕೀಯ ಸಮೀಕರಣಗಳು ಬದಲಾಗಿರುವುದನ್ನು ಈ ವಿಡಿಯೋದಲ್ಲಿರುವ ಚಿತ್ರಗಳು ಮತ್ತೊಮ್ಮೆ ಹೇಳುತ್ತವೆ. ಇಲ್ಲದೇ ಹೋದರೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಪಿಯ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನ ಜೊತೆಯಾಗಿ ಒಂದೇ ಫ್ರೇಮಿನಲ್ಲಿ ಸೆರೆಹಿಡಿಯುವುದು ಸಾಧ್ಯವಾದೀತೆ? ವಿಷಯ ನಿಮಗೆ ಗೊತ್ತಾಗುತ್ತಿದೆ. ಇಂದು ಕುಮಾರಸ್ವಾಮಿ ಅವರನ್ನು ಬೆಳಗ್ಗೆ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿಯ ಬಿಡದಿ ಮನೆಯಲ್ಲಿ (Bidadi residence) ಭೇಟಿಯಾದರು. ಕೈಯಲ್ಲಿ ಬೋಕೆ ಹಿಡಿದಿರುವ ಪ್ರತಾಪ್ ಸಿಂಹ ಹಿರಿಯ ನಾಯಕನ ಕಾಲು ಮುಟ್ಟಿ ನಮಸ್ಕರಿಸುತ್ತಿರುವುದನ್ನು ಚಿತ್ರಗಳಲ್ಲಿ ನೋಡಬಹುದು. ನಿಮ್ಮ ಸ್ಮೃತಿಪಟಲದಲ್ಲಿ 2018-19 ಸಾಲಿನಲ್ಲಿ ದಾಖಲಾಗಿರುವ ರಾಜಕೀಯ ವಿದ್ಯಮಾನಗಳನ್ನು ಸ್ವಲ್ಪ ಕೆದಕಿ ನೋಡಿ. ಆಗಿನದನ್ನು ಜ್ಞಾಪಿಸಿಕೊಂಡರೆ, ಈಗಿನ ಇಂಥ ಚಿತ್ರಗಳನ್ನು ಊಹಿಸುಕೊಳ್ಳುವುದೂ ಸಾಧ್ಯವಿರಲಿಲ್ಲ. ಆಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರನ್ನು ಪ್ರತಾಪ್ ಸಿಂಹ ಪದೇಪದೆ ತಮ್ಮ ಟ್ವೀಟ್ ಗಳಲ್ಲಿ ಟೀಕಿಸುತ್ತಿದ್ದರು. ಅವರ ಟ್ವೀಟ್ ಗಳಿಗೆ ಕುಮಾರಸ್ವಾಮಿ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ವೆಲ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮಾಡಿಕೊಂಡಿರುವುದರಿಂದ ಹಿಂದಿನ ವಿಷಯಗಳನ್ನು ಅವರು ಮರೆತಿದ್ದಾರೆ, ಆದರೆ ಮಾಧ್ಯಮದವರು ಮರೆಯಲಾದೀತೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on