ಕೆಎನ್​ ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

Edited By:

Updated on: Aug 11, 2025 | 9:12 PM

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯವಾಣಿಗಳು ಮತ್ತೊಮ್ಮೆ ನಿಜವಾಗಿವೆ. ಎರಡು ತಿಂಗಳ ಹಿಂದೆ "ಅರಸನ ಅರಮನೆಗೆ ಕಾರ್ಮೋಡ ಕವಿದಿತು" ಎಂದು ಹೇಳಿದ್ದರು. ಶಾಸಕ ಕೆ.ಎನ್. ರಾಜಣ್ಣ ಅವರ ರಾಜೀನಾಮೆಯಿಂದ ಇದು ಸಾಬೀತಾಗಿದೆ. ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಯುಗಾದಿ ಮತ್ತು ಸಂಕ್ರಾಂತಿ ಭವಿಷ್ಯವಾಣಿಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಗದಗ, ಆಗಸ್ಟ್​ 11: ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ಅನೇಕ ಬಾರಿ ನಿಜವಾಗಿದೆ. 2 ತಿಂಗಳ ಹಿಂದೆಯಷ್ಟೇ ಕೋಡಿಶ್ರೀಗಳು “ಅರಸನ ಅರಮನೆಗೆ ಕಾರ್ಮೋಡ ಕವಿದಿತು” ಎಂದು ಹೇಳಿದ್ದರು. ಕೋಡಿಶ್ರೀಗಳ ಭವಿಷ್ಯ ಈಗ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಶಾಸಕ ಕೆ ಎನ್​ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದು, ಈ ಮೂಲಕ ಕೋಡಿಶ್ರೀಗಳ ಭವಿಷ್ಯ ನಿಜವಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

ಇನ್ನು 2 ತಿಂಗಳ ಹಿಂದೆ ನುಡಿದ ಭವಿಷ್ಯದ ಬಗ್ಗೆ ಸದ್ಯ ಕೋಡಿಶ್ರೀಗಳು ಮಾತನಾಡಿ, ಅರಸನ ಅರಮನೆಗೆ ಕಾರ್ಮೋಡ ಕವಿದಿತು, ಎರಡು ತಿಂಗಳ ಹಿಂದೆ ಈ ಮಾತು ಹೇಳಿದ್ದೆ. ಕೇಂದ್ರ ಹಾಗೂ ರಾಜ್ಯಕ್ಕೆ ಅಪಾಯ ಆಗುತ್ತೆ. ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿದರು. ನಾವು ಯುಗಾದಿ ಹಾಗೂ ಸಂಕ್ರಾಂತಿ ಭವಿಷ್ಯ ಹೇಳುತ್ತೇವೆ. ರಾಜಕೀಯದಲ್ಲಿ ಕಾರ್ಮೋಡ ಇರೋದೆ ಎಂದು ಹೇಳಿದರು.